ಜೆಡಿಎಸ್ ಯಿಂದ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್: ಇಲ್ಲಿ ಕುಟುಂಬಸ್ಥರೇ ಟಾಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ರಾಜ್ಯ ಚುನಾವಣೆಗಾಗಿ ಈಗಾಗಲೇ ಬಿಜೆಪಿ, ಕಾಂಗ್ರೆಸ್, ತಮ್ಮ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದೂ, ಇದೀಗ ಜೆಡಿಎಸ್ ಪಕ್ಷದಿಂದ ಭರ್ಜರಿ ಪ್ರಚಾರ ನಡೆಸಲು ಪ್ಲಾನ್ ನಡೆಯುತ್ತಿದ್ದು, ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.

ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಇದ್ದಾರೆ. ಅಲ್ಲದೆ ಕುಟುಂಬಸ್ಥರೇ ಹೆಚ್ಚು ತುಂಬಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸಹೋದರ ಹೆಚ್ ಡಿ ರೇವಣ್ಣ ಇದ್ದರೇ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಇದ್ದಾರೆ.

ಇವರಲ್ಲದೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕುಪೇಂದ್ರ ರೆಡ್ಡಿ, ಟಿ.ಎ ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ, ಬಿ.ಎಂ ಫಾರೂಖ್, ಅಪ್ಪಾಜಿ ಗೌಡ, ಜಪ್ರುಲ್ಲಾ ಖಾನ್ ಹಾಗೂ ನಜ್ಮಾ ನಜೀರ್ ಸೇರಿದಂತೆ ಇತರರು ಪಟ್ಟಿಯಲ್ಲಿ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!