ಹೊಸ ದಿಗಂತ ವರದಿ,ಕಲಬುರಗಿ:
ಬೆಳ್ಳಂಬೆಳಿಗ್ಗೆ ಎಸಿಬಿ ತಂಡದಿಂದ ಲೋಕೋಪಯೋಗಿ ಇಲಾಖೆಯ ಜೆಇ ಅಧಿಕಾರಿ ಶಾಂತಗೌಡ ಬಿರಾದಾರ ಮನೆ ಮೇಲೆ ದಾಳಿ ಮಾಡಿದ್ದು, ಇಲ್ಲಿಯವರೆಗೆ 54 ಲಕ್ಷಕಿಂತ ಅಧಿಕ ಹಣ ಹಾಗೂ 100 ಗ್ರಾಂ, ಚಿನ್ನಾಭರಣ ಪತ್ತೆಯಾಗಿದೆ ಎಂದು ಎಸಿಬಿ ಎಸ್ಪಿ ಮೆಘಣ್ಣವರ ತಿಳಿಸಿದ್ದಾರೆ.
ಬುಧವಾರ ರಾಜ್ಯದ ವಿವಿಧೆಡೆ ಎಸಿಬಿ ತಂಡ ದಾಳಿಗೆ ಮುಂದಾಗಿದ್ದು,ನಗರದ ಗುಬ್ಬಿ ಕಾಲೋನಿಯ ಶಾಂತಗೌಡ ಬಿರಾದಾರ್ ಮನೆ ಮೆಲೂ ಸಹ ದಾಳಿ ನಡೆಸಲಾಗಿದೆ.
ಶಾಂತಗೌಡ ಬಿರಾದಾರ ಅವರ ಮನೆಯ ವಾಲ್ ಸೀಲಿಂಗ್ ಮೇಲೆ 6 ಲಕ್ಷ ನಗದು ಹಣ ಮತ್ತು 13.5 ಲಕ್ಷ ನೀರಿನ ಪೈಪನಲ್ಲಿ ಪತ್ತೆಯಾಗಿದೆ. ಒಂದು ಲಾಕರ್, ನ ಬಾಕ್ಸ್ ನಲ್ಲಿ 100 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ತೋಟದ ಮನೆಯಲ್ಲೂ ಸಹ ವಾಹನಗಳು, ಐಶಾರಾಮಿ ರೂಂಗಳಿವೆ. ಜೊತೆಗೆ ಐಶಾರಾಮಿ ಕಾರುಗಳಿವೆ. ಟ್ರ್ಯಾಕ್ಟರ್, ದ್ವೀಚಕ್ರ ವಾಹನಳಿವೆ.ಜೊತೆ ಜೊತೆಗೆ ಆಸ್ತಿ ಸಂಬಂಧಿಸಿದಂತೆ ದಾಖಲೆಗಳು ಪತ್ತೆಯಾಗಿವೆ.
ಇನ್ನೂ ಶೋಧ ಕಾರ್ಯವನ್ನು ಎಸಿಬಿ ಅಧಿಕಾರಿಗಳು ನಡೆಸಿದ್ದು,ಸಂಜೆ 7 ಗಂಟೆವರೆಗೆ ಶೋಧ ಕಾಯ೯ ನಡೆಯತ್ತದೆ ಎಂಬ ಮಾಹಿತಿ ಬಂದಿದೆ.
ಶಾಂತಗೌಡ ಬಿರಾದಾರ್ ಅವರ ಮನೆಯಿಂದ ಬಗೆದಷ್ಟು ಹೊರ ಬರುತ್ತಿದೆ ಎಂದು ಎಸಿಬಿ ಎಸ್ಪಿ ಮೆಘಣ್ಣವರ ತಿಳಿಸಿದ್ದಾರೆ.