ಜೆಇಇ ಮುಖ್ಯ ಪರೀಕ್ಷೆ 2023 ಅವಧಿ 1ರ ಅರ್ಜಿ ತಿದ್ದುಪಡಿಗೆ ಇಂದಿನಿಂದ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) JEE ಮುಖ್ಯ 2023ರ ಸೆಷನ್ 1ರ ಅರ್ಜಿ ನಮೂನೆ ತಿದ್ದುಪಡಿಗೆ ಇಂದಿನಿಂದ ಅವಕಾಶ ನೀಡಿದೆ. ಆಕಾಂಕ್ಷಿಗಳು ಇಂದಿನಿಂದ ಅಧಿಕೃತ ವೆಬ್‌ಸೈಟ್ – jeemain.nta.nic.in. ನಲ್ಲಿ ತಮ್ಮ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಿದ್ದುಪಡಿಗಳನ್ನು ಮಾಡಬಹುದು.

ಸೆಷನ್ 1ರ JEE ಮುಖ್ಯ 2023 ರ ಅರ್ಜಿಯಲ್ಲಿ ಬದಲಾವಣೆಗಳು ಮತ್ತು ಮಾರ್ಪಾಡುಗಳನ್ನು ಮಾಡಲು ಜನವರಿ 14, 2023 ರಂದು ರಾತ್ರಿ 11.50 ರವರೆಗೆ ಅವಕಾಶವಿರುತ್ತದೆ. ತದನಂತರ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಯಾವುದೇ ತಿದ್ದುಪಡಿಯನ್ನು ಮಾಡಲು ಅವಕಾಶವಿರುವುದಿಲ್ಲ.

“ಅಭ್ಯರ್ಥಿಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಈ ಅವಕಾಶವನ್ನು ವಿಸ್ತರಿಸಲಾಗಿದ್ದು, ಅಭ್ಯರ್ಥಿಗಳಿಗೆ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ನೀಡಲಾಗುವುದಿಲ್ಲ ಹಾಗಾಗಿ ಎಚ್ಚರಿಕೆ ವಹಿಸಿ” ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಜೆಇಇ ಮುಖ್ಯ ಅರ್ಜಿ ನಮೂನೆಯನ್ನು ತಿದ್ದುಪಡಿ ಮಾಡುವುದು ಹೇಗೆ ? :

ಹಂತ 1: ಅಧಿಕೃತ ವೆಬ್‌ಸೈಟ್‌ jeemain.nta.nic.in ಗೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ JEE(ಮುಖ್ಯ) 2023 ಸೆಷನ್ 1 ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನಂತಹ ನಿಮ್ಮ ವಿವರಗಳನ್ನು ಬಳಸಿಕೊಂಡು ಲಾಗಿನ್ ಮಾಡಿ.

ಹಂತ 4: ಫಾರ್ಮ್ ಅನ್ನು ಪ್ರವೇಶಿಸಿದ ನಂತರ ನೀವು ಅದರಲ್ಲಿ ಬದಲಾವಣೆಗಳನ್ನು ಮಾಡಬಹುದು.

ಹಂತ 5: ಮಾರ್ಪಾಡು ಮಾಡಿದ ನಂತರ ಅರ್ಜಿ ನಮೂನೆಯನ್ನು ಉಳಿಸಿ ಮತ್ತು ಸಲ್ಲಿಸಿ.

ಹಂತ 6: ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.

JEE ಮುಖ್ಯ ಪರೀಕ್ಷೆ 2023 ರ ಜನವರಿ ಅಧಿವೇಶನವನ್ನು ಜನವರಿ 24, 25, 27, 28, 29, 30, ಮತ್ತು 31, 2023 ರಂದು ನಡೆಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!