ಜಾರ್ಖಂಡ್ ಕೇಬಲ್ ಕಾರ್ ಅಪಘಾತ: ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ, ತನಿಖೆಗೆ ಆದೇಶಿಸಿದ ಸಿಎಂ ಹೇಮಂತ್ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೇಬಲ್ ಕಾರ್ ಅಪಘಾತದಲ್ಲಿ ಮಂಗಳವಾರ ಮಹಿಳೆಯೊಬ್ಬರು ರಕ್ಷಿಸುವ ವೇಳೆ ಬಿದ್ದು ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.
ಜಾರ್ಖಂಡ್‌ನ ತ್ರಿಕುಟ್ ಬೆಟ್ಟಗಳಲ್ಲಿ ರೋಪ್‌ವೇ ಕೇಬಲ್ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು 40 ಗಂಟೆಗ ಕಳೆದರೂ 15 ಪ್ರವಾಸಿಗರಲ್ಲಿ 10 ಮಂದಿಯನ್ನು ರಕ್ಷಿಸಿವೆ.
ತ್ರಿಕುಟ್ ಹಿಲ್ಸ್‌ಗೆ 770-ಮೀ ರೋಪ್‌ವೇಯಲ್ಲಿ ಸಿಲುಕಿದ ಕೇಬಲ್ ಕಾರ್‌ಗಳಿಂದ ಇದುವರೆಗೆ 50 ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡಿರುವ 12 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಂಯೋಜಿತ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರೋನ್‌ಗಳ ಸಹಾಯದಿಂದ ಸಿಕ್ಕಿಬಿದ್ದ ಜನರಿಗೆ ನೀರು ಮತ್ತು ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಎಂದು ದಿಯೋಘರ್ ಡೆಪ್ಯುಟಿ ಕಮಿಷನರ್ ಮಂಜುನಾಥ ಭಜಂತ್ರಿ ಹೇಳಿದ್ದಾರೆ.
ನಿನ್ನೆ ಸಂಜೆ ಹೆಲಿಕಾಪ್ಟರ್‌ನಿಂದ ವ್ಯಕ್ತಿಯೊಬ್ಬರನ್ನು ರಕ್ಷಿಸುವ ವೇಳೆ ಕೆಳಗೆ ಬಿದ್ದು ಅಪಘಾತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.ಬಳಿಕ ಹಲವರನ್ನು ರಕ್ಷಿಸಲಾಗಿತ್ತು. ಗಾಳಿಯಿಂದಾಗಿ ಪ್ರವೇಶದಲ್ಲಿ ಕಾರ್ಯಚರಣೆ ಕಷ್ಟಕರವಾಗಿದಿದ್ದರಿಂದ ಕಾರ್ಯಚರಣೆ ನಿನ್ನೆ ರಾತ್ರಿ ಸ್ಥಗಿತಗೊಳಿಸಲಾಗಿತ್ತು.
ಭಾನುವಾರ ದಿಯೋಘರ್‌ನ ತ್ರಿಕುಟ್ ಹಿಲ್ಸ್‌ನಲ್ಲಿ ರೋಪ್‌ವೇಯಲ್ಲಿ ಕೇಬಲ್ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ನಂತರ 40 ಕ್ಕೂ ಹೆಚ್ಚು ಜನರು ರೋಪ್‌ವೇಯಲ್ಲಿ ಸಿಲುಕಿಕೊಂಡರು.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಂಗಳವಾರ ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. 50 ಕ್ಕೂ ಹೆಚ್ಚು ಜನರು ಇದರಲ್ಲಿ ಸಿಲುಕಿಕೊಂಡರು ಮತ್ತು ಆಡಳಿತವು ರಕ್ಷಣಾ ಕಾರ್ಯಾಚರಣೆಗಳ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!