Monday, October 2, 2023

Latest Posts

ನೇಮಕಾತಿ ನೀತಿ ವಿರುದ್ಧ ಪ್ರತಿಭಟನೆ: ಜಾರ್ಖಂಡ್ ಸರ್ಕಾರಕ್ಕೆ ತಟ್ಟಿದ ಮುಷ್ಕರದ ಬಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಜಾರ್ಖಂಡ್ ಸ್ಟೇಟ್ ಸ್ಟೂಡೆಂಟ್ಸ್ ಯೂನಿಯನ್ (ಜೆಎಸ್ಎಸ್ಯು) ಬ್ಯಾನರ್ ಅಡಿಯಲ್ಲಿ ರಾಂಚಿಯಲ್ಲಿ ರಾಜ್ಯ ಸರ್ಕಾರದ ಪರಿಷ್ಕೃತ ನೇಮಕಾತಿ ನೀತಿಯ ವಿರುದ್ಧ 48 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಪೊಲೀಸರನ್ನು ನಿಯೋಜಿಸಿದ್ದಾರೆ.

ಇತ್ತೀಚೆಗೆ, ಜಾರ್ಖಂಡ್ ಸರ್ಕಾರವು ’60:40′ ನೇಮಕಾತಿ ನೀತಿಯನ್ನು ತಂದಿತು, ಅದರ ಅಡಿಯಲ್ಲಿ 60 ಪ್ರತಿಶತದಷ್ಟು ಸೀಟುಗಳನ್ನು ರಾಜ್ಯದ ಆಕಾಂಕ್ಷಿಗಳಿಗೆ ಮೀಸಲಿಡಲಾಗಿದೆ, ಆದರೆ ಉಳಿದ 40 ಶೇಕಡಾ ಸೀಟುಗಳು ಎಲ್ಲರಿಗೂ ಮುಕ್ತವಾಗಿವೆ.

ಇದನ್ನು ವಿರೋಧಿಸಿ ಕಳದೆ ಮಾರ್ಚ್‌ನಲ್ಲಿ, ಬಜೆಟ್ ಅಧಿವೇಶನದ ಕೊನೆಯ ದಿನದ ಕಲಾಪಗಳು ನಡೆಯುತ್ತಿರುವ ರಾಜ್ಯ ವಿಧಾನಸಭೆಯ ಆವರಣವನ್ನು ಮುತ್ತಿಗೆ ಹಾಕಲು ನೂರಾರು ವಿದ್ಯಾರ್ಥಿಗಳು ‘ನಯಾ ವಿಧಾನಸಭಾ ಅಧಿಕಾರ ಮಾರ್ಚ್’ ಅನ್ನು ಆಯೋಜಿಸಿದ್ದರು.

ಈ ಪ್ರದೇಶದಲ್ಲಿ ಪೊಲೀಸರು ಬ್ಯಾರಿಕೇಡ್ ಮತ್ತು ಭಾರೀ ಬಲವನ್ನು ನಿಯೋಜಿಸುವ ಮೂಲಕ ವಿಧಾನಸಭೆಗೆ ಸುಮಾರು 1 ಕಿಮೀ ದೂರದಲ್ಲೇ ಪ್ರತಿಭಟನಾಕಾರರನ್ನು ತಡೆದರು. ಆದರೆ ವಿದ್ಯಾರ್ಥಿಗಳು ವಿಧಾನಸೌಧಕ್ಕೆ ತೆರಳುವ ಸಲುವಾಗಿ ಮಾರ್ಗವನ್ನು ತಿರುಗಿಸಿ ಹೊಲಗಳಿಗೆ ತೆರಳಿದ್ದರು.

ಜಾರ್ಖಂಡ್ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು.ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಬಳಿಕ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು. ವಿದ್ಯಾರ್ಥಿ ಮುಖಂಡ ಜೈರಾಮ್ ಮಹತೋ ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!