ಅಮೆರಿಕದಲ್ಲಿ ಬೆಳಕಿಗೆ ಬಂದಿದೆ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಅಡ್ಡಪರಿಣಾಮ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೋವಿಡ್ ನಿಯಂತ್ರಣಕ್ಕೆ ತಮ್ಮ ಲಸಿಕೆಯೇ ಪರಮೋಚ್ಛ ಎಂಬಂತೆ ಆಡುತ್ತಿದ್ದ ಪಾಶ್ಚಾತ್ಯ ರಾಷ್ಟ್ರಗಳಿಗೆ ಶಾಕಿಂಗ್ ನ್ಯೂಸ್.

ಅಮೆರಿಕದಲ್ಲಿ ಚಾಲ್ತಿಯಲ್ಲಿದ್ದ ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ ಲಸಿಕೆ ತೆಗೆದುಕೊಂಡವರಲ್ಲಿ ಅಡ್ಡಪರಿಣಾಮ ಪತ್ತೆಯಾಗಿದ್ದು, ಈಗ ಆ ಲಸಿಕೆಯ ಬಳಕೆಯನ್ನು ನಿಯಂತ್ರಿಸಲಾಗಿದೆ.

ಅದಾಗಲೇ ಒಂದು ಕೋಟಿಗೂ ಅಧಿಕ ಮಂದಿ ಪಡೆದಿರುವ ಈ ಲಸಿಕೆ, ಜೀವಕ್ಕೇ ಅಪಾಯವಾಗುವಂಥ ರಕ್ತ ಹೆಪ್ಪುಗಟ್ಟುವಿಕೆ ಉಂಟುಮಾಡುವ ಉದಾಹರಣೆ ಪತ್ತೆಯಾಗಿರುವುದಾಗಿ ಅಮೆರಿಕದ ಆಹಾರ ಮತ್ತು ಔಷಧದ ಆಡಳಿತ (ಎಫ್ ಡಿ ಎ) ಹೇಳಿದೆ.

ಕಳೆದ ಫೆಬ್ರವರಿಯಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ ಲಸಿಕೆಗೆ ಅಮೆರಿಕದಲ್ಲಿ ತುರ್ತು ಬಳಕೆ ಅನುಮತಿ ಸಿಕ್ಕಿತ್ತು. ಈ ವರ್ಷದ ಮಾರ್ಚ್ 18ರವರೆಗೆ ನಡೆಸಿದ ಅಧ್ಯಯನದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟುಮಾಡುವ 60 ಪ್ರಕರಣಗಳು ಈ ಲಸಿಕೆ ಪಡೆದವರಲ್ಲಿ ಉಂಟಾಗಿರುವುದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!