ಜಿನ್ನಾ ಟವರ್‌ ಮರುನಾಮಕರಣಕ್ಕೆ ಬಿಜೆಪಿ ಪಟ್ಟು, ಸರ್ಕಾರಕ್ಕೆ ಡೆಡ್‌ಲೈನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಜಿನ್ನಾ ಟವರ್‌ ವಿಚಾರ ಮತ್ತೆ ಮನ್ನೆಲೆಗೆ ಬಂದಿದೆ. ಜಿನ್ನಾ ಟವರ್‌ ಹೆಸರು ಬದಲಾವಣೆ ವಿಚಾರವಾಗಿ ಈ ಹಿಂದೆಯಿಂದಲೂ ವಾಗ್ವಾದ ನಡೆಯುತ್ತಲಿದೆ. ಕಳೆದೆರೆಡು ತಿಂಗಳ ಹಿಂದೆ ಜಿಲ್ಲಾಡಳಿತ ಈ ಟವರ್‌ಗೆ ತ್ರಿವರ್ಣ ಬಣ್ಣ ಹಚ್ಚಿ ಧ್ವಜ ಹಾರಿಸಲಾಗಿತ್ತು. ಇದೀಗ ಟವರ್‌ ಹೆಸರು ಬದಲಾವಣೆ ಮಾಡುವಂತೆ ಬಿಜೆಪಿ ಪಟ್ಟು ಹಿಡಿದಿದೆ. ಕೆಲ ವಾರಗಳಿಂದ ಹೆಸರು ಬದಲಿಸಿ ಎಂದು ಹೇಳುತ್ತಿದ್ದ ಬಿಜೆಪಿ ದಿಢೀರ್ ವೇಗ ಹೆಚ್ಚಿಸಿದ್ದು, ಆಗಸ್ಟ್ 16ರೊಳಗೆ ಜಿನ್ನಾ ಗೋಪುರಕ್ಕೆ ಅಬ್ದುಲ್‌ ಕಲಾಂ ಅವರ ಹೆಸರು ಮರುನಾಮಕರಣ ಮಾಡದಿದ್ದರೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸ್ಥಳೀಯ ಮಾಧ್ಯಮವೊಂದಕ್ಕೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸತ್ಯ ಕುಮಾರ್, ”ಜಿನ್ನಾ ಟವರ್ ಹೆಸರನ್ನು ಬದಲಾವಣೆ ಮಾಡುವಂತೆ ಶಾಂತಿಯುತವಾಗಿ ಕೇಳುತ್ತಿದ್ದರೆ ಸರ್ಕಾರ ಕಿವಿಗೊಡುತ್ತಿಲ್ಲ. ಬದಲಿಗೆ ನಮ್ಮ ಮೇಲೆ ಅಕ್ರಮ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದಾರೆ. ನರಹಂತಕ ಜಿನ್ನಾ ಹೆಸರನ್ನು ತೆಗೆದು ದೇಶದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಅಥವಾ ಬೇರೆಯವರ ಹೆಸರಿಡುವಂತೆ ನಾವು ಕೋರುತ್ತಿದ್ದೇವೆ” ಎಂದರು.

ಬಿಜೆಪಿ ಯುವ ಮೋರ್ಚಾದ ಹೋರಾಟದಿಂದ ಜಿನ್ನಾ ಟವರ್‌ಗೆ ಬಣ್ಣ ಬದಲಿಸಿದರು. ‘ಬಣ್ಣ ಬದಲಾದರೆ ಜಿನ್ನಾ ಮಾಡಿದ ದೌರ್ಜನ್ಯ, ಅರಾಜಕತೆ ಬದಲಾಗುವುದೇ? ಎಂದು ಪ್ರಶ್ನೆ ಮಾಡಿದ್ದಾರೆ. ಜಿನ್ನಾ ಕರೆಗೆ ಸಾವಿರಾರು ಕೋಟಿ ಆಸ್ತಿ ಲೂಟಿಯಾಯಿತು. 5,000 ಜನರ ಕಗ್ಗೊಲೆ ಮಾಡಲಾಯಿತು. ಆಗಸ್ಟ್ 16 ರೊಳಗೆ ಜಿನ್ನಾ ಟವರ್ ಮರುನಾಮಕರಣ ಮಾಡದಿದ್ದಲ್ಲಿ, ಪರಿಣಾಮಗಳು ತೀವ್ರವಾಗಿರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!