ಹೊಸದಿಗಂತ ವರದಿ, ಮಡಿಕೇರಿ:
ಮತಾಂತರಕ್ಕೆ ಯತ್ನದ ಆರೋಪದಡಿ ‘ದಿಡ್ಡಳ್ಳಿ’ ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಕ್ಷಿಣ ಕೊಡಗಿನ ಮತ್ತೂರು ಗಿರಿಜನರ ಕಾಲೋನಿಯಲ್ಲಿ ದಿಡ್ಡಳ್ಳಿ ಹೋರಾಟದ ರೂವಾರಿ ಜೆ.ಕೆ.ಮುತ್ತಮ್ಮ ಮತಾಂತರಕ್ಕೆ ಯತ್ನ ನಡೆಸಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ಸಂದರ್ಭ ಪೊನ್ನಂಪೇಟೆ ಪೊಲೀಸರು ಮಧ್ಯಪ್ರವೇಶಿಸಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಾನು ಅನ್ಯಕಾರ್ಯಕ್ಕೆ ತೆರಳಿದ್ದು, ವಿನಾ ಕಾರಣ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮುತ್ತಮ್ಮ ಪ್ರತಿದೂರು ನೀಡಿದ್ದಾರೆ.
ಎರಡೂ ದೂರನ್ನು ಸ್ವೀಕರಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಜಯಕುಮಾರ್, ವೃತ್ತನಿರೀಕ್ಷಕ ಜಯರಾಂ ಭೇಟಿ ನೀಡಿದ್ದಾರೆ
ಗೋಣಿಕೊಪ್ಪಲ ಪೊಲೀಸ್ ಠಾಣೆ ಎದುರು ಜಮಾಯಿಸಿರುವ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಮುತ್ತಮ್ಮ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.