ಕೌಶಲ ವೃದ್ಧಿಯಿಂದ ಉದ್ಯೋಗ ಭದ್ರತೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ದಿಗಂತ ವರದಿ ಮೈಸೂರು:

ಸ್ಪರ್ಧಾತ್ಮಕ ಯುಗದಲ್ಲಿ ಬೇಕಾದ ಎಲ್ಲಾ ರೀತಿಯ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಕಲಿತರೆ, ಉದ್ಯೋಗ ಭದ್ರತೆ ಸಿಗುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕಿವಿ ಮಾತು ಹೇಳಿದರು.
ಗುರುವಾರ ಮೈಸೂರಿನ ನಗರದ ಮಾನಸ ಗಂಗೋತ್ರಿಯ ರಸಾಯನಶಾಸ್ತç ವಿಭಾಗದ ಸೆಮಿನಾರ್ ಹಾಲ್ ನಲ್ಲಿ ನಡೆದ `ಸ್ಟುಡೆಂಟ್ ಕೆರಿಯರ್ ಡೆವಲಪ್‌ಮೆಂಟ್ ಪ್ರೋಗ್ರಾಮ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ನಾವೆಲ್ಲ ಓದುವಾಗ ವಿಜ್ಞಾನ ವಿಷಯ ಓದುವವರ ಸಂಖ್ಯೆ ಕಡಿಮೆ ಇತ್ತು. ಆದರೆ, ಇಂದು ವಿಜ್ಞಾನ ಓದುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸ್ಪರ್ಧೆಯು ಹೆಚ್ಚಾಗಿದ್ದು, ಅವಕಾಶಗಳು ಕಡಿಮೆ ಆಗಿದೆ. ಹಾಗಾಗಿ ವಿಜ್ಞಾನ ವಿದ್ಯಾರ್ಥಿಗಳು ವಿಷಯ ಜ್ಞಾನದ ಜೊತೆಗೆ ಕೌಶಲ್ಯವನ್ನೂ ವೃದ್ಧಿಸಿಕೊಂಡರೆ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವೆಂದು ತಿಳಿಸಿದರು.
ಸಾಮಾನ್ಯವಾಗಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಸಬ್ಜೆಟ್ ನಾಲೆಡ್ಜ್ ಇರುತ್ತದೆ. ಆದರೆ, ಕಮ್ಯೂನಿಕೇಶನ್ ಸ್ಕಿಲ್, ಸ್ವಯಂ ಆತ್ಮಸ್ಥೆರ್ಯ ಇರುವುದಿಲ್ಲ. ಇದನ್ನು ಮನಗಂಡು ಇಂದು ರಸಾಯನಶಾಸ್ತç ವಿಭಾಗದ ವತಿಯಿಂದ ಕೆರಿಯರ್ ಡೆವಲಪ್ ಮೆಂಟ್ ಪ್ರೋಗ್ರಾಮ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನದ ಎಂಡಿ ಬಸವರಾಜು, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಪಿ.ಸದಾಶಿವ, ರಸಾಯನ ಶಾಸ ವಿಭಾಗದ ಮುಖ್ಯಸ್ಥ ಪ್ರೊ.ನಾಗರಾಜ ನಾಯ್ಕ್ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!