ಅಮೆರಿಕದಲ್ಲಿ ಐತಿಹಾಸಿಕ ನಿರ್ಣಾಯ: ಸಲಿಂಗ ವಿವಾಹಕ್ಕೆ ಇನ್ನು ಕಾನೂನಿನ ಮಾನ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸಲಿಂಗ ವಿವಾಹ ಕಾನೂನಿಗೆ ಸಹಿ ಹಾಕುವುದರೊಂದಿಗೆ ಅಮೆರಿಕ ಐತಿಹಾಸಿಕ ನಿರ್ಣಯವನ್ನು ಅಗೀಕರಿಸಿತು. ಶ್ವೇತಭವನದಲ್ಲಿ ನೆರೆದಿದ್ದ ಸಾವಿರಾರು ಮಂದಿ ಸಂಭ್ರಮಾಚರಣೆ ನಡೆಸಿದರು.
“ಈ ಕಾನೂನು ಮತ್ತು ಅದು ರಕ್ಷಿಸುವ ಪ್ರೀತಿಯು ಸಲಿಂಗ ವಿವಾಹವನ್ನು ದ್ವೇಷಿಸುವವರಿಗೆ ಉತ್ತರವಾಗಿದೆ.  “ಅದಕ್ಕಾಗಿಯೇ ಈ ಕಾನೂನು ಪ್ರತಿಯೊಬ್ಬ ಅಮೇರಿಕನಿಗೂ ಮುಖ್ಯವಾಗಿದೆ.” ಎಂದು ಜೊ ಬಿಡೆನ್‌ ಹೇಳಿದರು.
ಗಾಯಕರಾದ ಸ್ಯಾಮ್ ಸ್ಮಿತ್ ಮತ್ತು ಸಿಂಡಿ ಲಾಪರ್ ಸಲಿಂಗ ವಿವಾಹ ಮಾನ್ಯತೆಯನ್ನು ಸಂಭ್ರಮಿಸಿ ಹಾಡಿದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲೆಸ್ಬಿಯನ್ ವಿವಾಹವನ್ನು ನೆರವೇರಿಸುವ ಮೂಲಕ ಅಧಿಕೃತವಾಗಿ ವಿವಾಹಕ್ಕೆ ಮಾನ್ಯತೆ ನೀಡಿದರು.
ಅಮೆರಿಕದ ಎರಡೂ ಪಕ್ಷಗಳ ಶಾಸಕರು ಮಂಗಳವಾರದ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು ದೇಶದ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದಾದ ಸಲಿಂಗ ಸಂಬಂಧಕ್ಕೆ ದೇಶದ ಸ್ವೀಕಾರವನ್ನು ಪ್ರತಿಬಿಂಬಿಸುತ್ತದೆ.
“ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟಕ್ಕೆ ಸಿಕ್ಕ ಜಯವಿದು” ಎಂದು ಮಾನವ ಹಕ್ಕುಗಳ ಅಭಿಯಾನದ ಅಧ್ಯಕ್ಷ ಕೆಲ್ಲಿ ರಾಬಿನ್ಸನ್ ಹೇಳಿದರು. “ಇದು ಒಂದು ದೊಡ್ಡ ಹೆಜ್ಜೆಯಾಗಿದೆ, ನಾವು ಸಾಧಿಸಿದ ವಿಜಯಗಳನ್ನು ನಾವು ಸಂಭ್ರಮಿಸಬೇಕು ಮತ್ತು ಹೋರಾಟದ ಭವಿಷ್ಯವನ್ನು ಉತ್ತೇಜಿಸಲು ಅದನ್ನು ಬಳಸಬೇಕು” ಎಂದು ರಾಬಿನ್ಸನ್ ಹೇಳಿದರು.
ಹೊಸ ಕಾನೂನು ಸಲಿಂಗಕಾಮಿ ವಿವಾಹಗಳನ್ನು ಸಂರಕ್ಷಿಸುವ ಉದ್ದೇಶವನ್ನು ಹೊಂದಿದೆ. ಅಮೆರಿಕ ಸುಪ್ರೀಂ ಕೋರ್ಟ್ 2015 ರಲ್ಲಿ ರಾಷ್ಟ್ರವ್ಯಾಪಿ ಸಲಿಂಗ ಒಕ್ಕೂಟಗಳನ್ನು ಕಾನೂನುಬದ್ಧಗೊಳಿಸಿತು.ಇದೀಗ ಹೊಸ ಕಾನೂನು ಸಲಿಂಗ ವಿವಾಹಗಳಿಗೆ ಸಮ್ಮತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!