ಅಮೆರಿಕದ ವೈಟ್ ಹೌಸ್‍ನಲ್ಲಿ ಜೋ ಬೈಡನ್ ಮೊಮ್ಮಗಳ ಮದುವೆ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವೈಟ್ ಹೌಸ್‍ನಲ್ಲಿ ಸಂಭ್ರಮ ಮನೆಮಾಡಿದ್ದು, ಅಧ್ಯಕ್ಷ ಜೋ ಬೈಡನ್ ಅವರ ಮೊಮ್ಮಗಳು ನವೋಮೆ ಬೈಡನ್ ಹಾಗೂ ಪೀಟರ್ ನೀಲ್ ಅವರು ಶ್ವೇತ ಭವನದ ಸೌತ್ ಲಾನ್‍ನಲ್ಲಿ ಶನಿವಾರ (ನ. 19) ವಿವಾಹವಾಗಲಿದ್ದಾರೆ.

4 ವರ್ಷಗಳ ಹಿಂದೆ ನ್ಯೂಯಾರ್ಕ್‍ನಲ್ಲಿ ಜೋ ಬೈಡನ್ ಅವರ ಮೊಮ್ಮಗಳು ನೋಮಿ(28) ಮತ್ತು ನೀಲ್ (25) ಅವರು ಸ್ನೇಹಿತರ ಮೂಲಕ ಭೇಟಿಯಾಗಿದ್ದರು. ನೋಮಿ ವಕೀಲರಾಗಿದ್ದರೆ, ನೀಲ್ ಇತ್ತೀಚೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ಇಬ್ಬರೂ ವಾಷಿಂಗ್ಟನ್‍ನಲ್ಲಿ ವಾಸಿಸುತ್ತಿದ್ದಾರೆ.

ವೈಟ್ ಹೌಸ್‍ನಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಇತಿಹಾಸದಲ್ಲಿ 19ನೇ ವಿವಾಹವಾಗಿದೆ. ಈವರೆಗೆ ಶ್ವೇತಭವನದಲ್ಲಿ ನಡೆದ 18 ಮದುವೆಯಾಗಿದ್ದು, ಅದರಲ್ಲಿ 9 ಹಿಂದಿನ ಅಮೆರಿಕದ ಅಧ್ಯಕ್ಷರ ಮಕ್ಕಳ ಮದುವೆ ಆಗಿದೆ.

ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರ ಮೊಮ್ಮಗಳು ವೈಟ್‍ಹೌಸ್‍ನಲ್ಲಿ ಮದುವೆ ಆಗಲಿದ್ದಾರೆ ಎಂದು ವೈಟ್‍ಹೌಸ್ ಹಿಸ್ಟಾರಿಕಲ್ ಅಸೋಸಿಯೇಷನ್ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!