Wednesday, August 10, 2022

Latest Posts

ಅಲ್ಲಿಂದಲೇ ವಿಶ್ ಮಾಡಿ, ಆಶೀರ್ವದಿಸಿ: ಅಭಿಮಾನಿಗಳಿಗೆ ಜೋಗಿ ಪ್ರೇಮ್ ಮನವಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸ್ಯಾಂಡಲ್ ವುಡ್ ನಟ, ನಿರ್ದೇಶಕ ಜೋಗಿ ಪ್ರೇಮ್ ಅವರಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ. ಆದರೆ ಅವರು ಈ ವರ್ಷ ಕೂಡ ಸರಳವಾಗಿಯೇ ಬರ್ತ್‌ಡೇ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಈ ಪ್ರಯುಕ್ತ ಅಭಿಮಾನಿಗಳಿಗೆ ವಿಡಿಯೋ ಸಂದೇಶವೊಂದನ್ನು ನೀಡಿದ್ದಾರೆ. ‘ಅ.22 ರಂದು ನನ್ನ ಹುಟ್ಟುಹಬ್ಬ. ಪ್ರತಿ ವರ್ಷ ನನ್ನ ಅನ್ನದಾತರು, ಸ್ನೇಹಿತರು ಹಾಗೂ ಬಂಧು-ಬಳಗದವರು ವಿಶ್ ಮಾಡುತ್ತಿದ್ದರು. ಈ ಸಲ ನಾನು ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ಏಕ್ ಲವ್ ಯಾ ಸಿನಿಮಾ ಕೆಲಸ ಹಿನ್ನೆಲೆ ಮುಂಬೈ ನಲ್ಲಿ ಇರುತ್ತೇನೆ. ದಯವಿಟ್ಟು ಯಾರೂ ನನ್ನ ಮನೆ ಬಳಿ ಬಂದು ಕಾಯಬೇಡಿ. ನೀವಿದ್ದಲ್ಲಿಂದಲೇ ವಿಶ್ ಮಾಡಿ, ಆಶೀರ್ವದಿಸಿ’ ಎಂದು ಪ್ರೇಮ್ ಮನವಿ ಮಾಡಿದ್ದಾರೆ.

ದೀಪಾವಳಿಯಂದು ಏಕ್ ಲವ್ ಯಾ ಸಿನಿಮಾದ ಮೂರನೇ ಸಾಂಗ್ ರಿಲೀಸ್ ಮಾಡಲಿದ್ದೇವೆ. ಎಲ್ಲರು ಈ ಹಾಡು ನೋಡಿ ಹಾರೈಸಿ, ಜ. 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಪ್ರೇಮ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss