Tuesday, June 28, 2022

Latest Posts

ಶೀಘ್ರದಲ್ಲೇ ಭಾರತದಲ್ಲಿ ಜಾನ್ಸನ್ & ಜಾನ್ಸನ್ ಸಿಂಗಲ್ ಡೋಸ್ ಕೊರೋನಾ​ ಲಸಿಕಾ ಪ್ರಯೋಗ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಈಗಾಗಲೇ ಕೊರೋನಾ ವಿರುದ್ಧ ಹೋರಾಡಲು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಡಿಸಿಜಿಐ ಅನುಮತಿ ನೀಡಿದ್ದು, ಇದೀಗ ಅಮೆರಿಕದ ಜಾನ್ಸನ್ & ಜಾನ್ಸನ್ ಸಿಂಗಲ್ ಡೋಸ್ ಕೊರೋನಾ​ ಲಸಿಕಾ ಪ್ರಯೋಗವನ್ನು ಶೀಘ್ರದಲ್ಲೇ ಪ್ರಾರಂಭಿಸಲು ಅನುಮತಿಸಲಾಗುವುದು ಎನ್ನಲಾಗುತ್ತಿದೆ.
ಈ ಕುರಿತಂತೆ ಜಾನ್ಸನ್ & ಜಾನ್ಸನ್ ಕಂಪನಿ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸುವ ಮಹತ್ವದ ಬೆಳವಣಿಗೆಯಲ್ಲಿ, ಯುಎಸ್-ಫಾರ್ಮಾ ದೈತ್ಯ ಜಾನ್ಸನ್ ಮತ್ತು ಜಾನ್ಸನ್​ನ ಕೋವಿಡ್ -19 ಲಸಿಕೆ ಸಿಂಗಲ್​ ಡೋಸ್ ಕ್ಲಿನಿಕಲ್ ಪ್ರಯೋಗವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿದು ಬಂದಿದೆ.
ಜಾನ್ಸನ್ ಮತ್ತು ಜಾನ್ಸನ್ ಸಿಡಿಎಸ್​ಸಿಒ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್)ಗೆ ಪತ್ರವೊಂದನ್ನು ಕಳುಹಿಸಿದ್ದಾರೆ. ಅವರು ಭಾರತದಲ್ಲಿ ಕ್ಲಿನಿಕಲ್ ಬ್ರಿಡ್ಜಿಂಗ್ ಪ್ರಯೋಗಗಳನ್ನು ನಡೆಸಲು ಅನುಮತಿಗಾಗಿ ಶೀಘ್ರದಲ್ಲೇ ಅರ್ಜಿ ಸಲ್ಲಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ಕೊರೋನಾ​ ಎರಡನೇ ಅಲೆ ಉಲ್ಬಣದಿಂದಾಗಿ ಹೆಚ್ಚಿನ ಬೇಡಿಕೆಯ ಮಧ್ಯೆ ಭಾರತ ತನ್ನ ಲಸಿಕೆ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಬ್ರಿಡ್ಜಿಂಗ್ ಪ್ರಯೋಗವು ಕ್ಲಿನಿಕಲ್ ಪ್ರಯೋಗವಾಗಿದೆ. ಈ ಪ್ರಯೋಗದಲ್ಲಿ ಲಸಿಕೆಯ ಪರಿಣಾಮಕಾರಿತ್ವ ಪರೀಕ್ಷಿಸುವ ಅಗತ್ಯವಿಲ್ಲ. ಕಾರಣ ಇದನ್ನು ಈಗಾಗಲೇ ಮತ್ತೊಂದು ಕ್ಲಿನಿಕಲ್ ಪ್ರಯೋಗದಲ್ಲಿ ಸ್ಥಾಪಿಸಲಾಗಿದೆ.
ಈ ಮೂಲಕ ಭಾರತದ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್​ ಬಳಕೆಗೆ ಅನುಮತಿ ಬಳಿಕ, ಇದೀಗ ಮೂರನೇ ಲಸಿಕೆ ಕ್ಲಿನಿಕಲ್ ಪ್ರಯೋಗಕ್ಕೆ ಡಿಜಿಸಿಐ ಅನುಮತಿ ನೀಡಿದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss