Thursday, August 11, 2022

Latest Posts

ಮುಂದಿನ ವಾರದಿಂದ ಕೊವಿನ್​ ಪೋರ್ಟಲ್​​​ನಲ್ಲಿ ಹಿಂದಿ ಸೇರಿ 14 ಭಾಷೆಗಳು ಲಭ್ಯ: ಕೇಂದ್ರ ಆರೋಗ್ಯ ಇಲಾಖೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವ ಕೊವಿನ್​ (CoWin) ಪೋರ್ಟಲ್​​​ನಲ್ಲಿ​ ಮುಂದಿನ ವಾರದಿಂದ ಹಿಂದಿ ಸೇರಿ, 14 ಭಾಷೆಗಳು ಲಭ್ಯವಾಗಲಿದೆ. ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್ 19ಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚಿಸಲು ಹಲವು ಸಚಿವರು ಸೇರಿ ನಡೆಸಿದ 26ನೇ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನೇತೃತ್ವವನ್ನು ಆರೋಗ್ಯ ಸಚಿವ ಹರ್ಷವರ್ಧನ್​ ವಹಿಸಿದ್ದರು ಎಂದು ಇಲಾಖೆ ಹೇಳಿದೆ.

ಭಾರತದಲ್ಲಿ ಕೊವಿಡ್​ 19 ರೂಪಾಂತರ ಪತ್ತೆ, ನಿರ್ವಹಣೆಗಾಗಿ INSACOG (Indian SARS-CoV-2 Genomics Consortium)ನೆಟ್ವರ್ಕ್​​​ಗೆ ಇನ್ನೂ 17 ಪ್ರಯೋಗಾಲಯಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.

INSACOG ನೆಟ್ವರ್ಕ್​​ನಲ್ಲಿ ಸದ್ಯ 10 ಲ್ಯಾಬೋರೇಟರಿಗಳು ಮಾತ್ರ ಇವೆ. ಅದನ್ನೀಗ 17ಕ್ಕೆ ಏರಿಸಲಾಗುವುದು. ಕಳೆದ 26ದಿನಗಳಲ್ಲಿ ಇದೇ ಮೊದಲಬಾರಿಗೆ ದೇಶದಲ್ಲಿ ಇಂದು 3 ಲಕ್ಷಕ್ಕಿಂತಲೂ ಕಡಿಮೆ ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಒಂದು ಸಕಾರಾತ್ಮಕ ವಿಚಾರ ಎಂದು ಹರ್ಷವರ್ಧನ್​ ತಿಳಿಸಿದ್ದಾರೆ.

ಇದೇ ವೇಳೆ ಡಿಆರ್‌ಡಿಒ 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ) ಔಷಧವನ್ನು ಅಭಿವೃದ್ಧಿ ಪಡಿಸಿದ್ದರ ಬಗ್ಗೆ ಶ್ಲಾಘಿಸಿದರು. ಡಿಆರ್​ಡಿಒ ಈ ಔಷಧ ಅಭಿವೃದ್ಧಿ ಪಡಿಸುವ ಕೆಲಸವನ್ನು ಕಳೆದ ವರ್ಷ ಏಪ್ರಿಲ್​​ನಿಂದ ಪ್ರಾರಂಭ ಮಾಡಿತ್ತು. ಇಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಕೋವಿಡ್ ಸೋಂಕಿಗೆ ತತ್ತರಿಸಿರುವ ರಾಜ್ಯಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿರುವ ಆರೋಗ್ಯ ಸಚಿವರು,ಇಲ್ಲಿಯವರೆಗೆ 4.22 ಕೋಟಿಗೂ ಅಧಿಕ N95 ಮಾಸ್ಕ್​​ಗಳು, 1.76 ಕೋಟಿ ಪಿಪಿಇ ಕಿಟ್​​ಗಳು, 52.64 ಲಕ್ಷ ರೆಮ್​ಡೆಸಿವಿರ್​ ಇಂಜೆಕ್ಷನ್​​ ಮತ್ತು 45,066 ವೆಂಟಿಲೇಟರ್​​ಗಳನ್ನು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss