ಜೋಶಿಮಠದಲ್ಲಿ ಭೂ ಕುಸಿತ: ಹಾನಿಗೀಡಾದ ಹೋಟೆಲ್, ಮನೆಗಳ ಧ್ವಂಸ ಕಾರ್ಯ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭೂಕುಸಿತ ಹಿನ್ನೆಲೆಯಲ್ಲಿ ಬಿರುಕು ಬಿಟ್ಟ ಹೋಟೆಲ್‌ಗಳು ಮತ್ತು ಮನೆಗಳನ್ನು ಕೆಡವಲು ಪ್ರಾರಂಭಿಸುವುದಾಗಿ ಜೋಶಿಮಠದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮಲಾರಿ ಇನ್ ಮತ್ತು ಮೌಂಟ್ ವ್ಯೂ ಹೋಟೆಲ್‌ಗಳನ್ನು ಮಂಗಳವಾರ ನೆಲಸಮ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಎಲ್ಲಾ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಸಿಬಿಆರ್‌ಐ) ತಜ್ಞರ ತಂಡದ ಮೇಲ್ವಿಚಾರಣೆಯಲ್ಲಿ ಕಟ್ಟಡಗಳ ಉರುಳಿಸುವಿಕೆ ಪ್ರಾರಂಭವಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವೊಂದು ಅಗತ್ಯವಿದ್ದರೆ ಡೆಮಾಲಿಷನ್ ಕಾರ್ಯದಲ್ಲಿ ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ಸನ್ನದ್ಧವಾಗಿದೆ.

ಸೋಮವಾರ, ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ಅವರು ಚಮೋಲಿ ಜಿಲ್ಲೆಗೆ ಆಗಮಿಸಿ ಭೂಮಿ ಕುಸಿತದಿಂದ ಆಸ್ತಿಗಳಿಗೆ ಆಗಿರುವ ಹಾನಿಯ ಸಮೀಕ್ಷೆ ಮತ್ತು ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಲು ಕೇಂದ್ರ ತಂಡ ಆಗಮಿಸಲಿದೆ ಎಂದು ತಿಳಿಸಿದರು.

“ಗೃಹ ಸಚಿವಾಲಯದ ತಂಡವು ಮಂಗಳವಾರ ಜೋಶಿಮಠಕ್ಕೆ ಬರಲಿದೆ. ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) ರೂರ್ಕಿಯ ತಂಡದ ಮೇಲ್ವಿಚಾರಣೆಯಲ್ಲಿ ನಾಳೆ ಕಟ್ಟಡಗಳ ನೆಲಸಮ ಪ್ರಾರಂಭವಾಗಲಿದೆ” ಎಂದು ಖುರಾನಾ ಈ ಹಿಂದೆ ಹೇಳಿದ್ದರು. ಅದರಂತೆ ಇಂದು ಕಟ್ಟಡಗಳ ನೆಲಸಮ ಕಾರ್ಯ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!