Monday, August 8, 2022

Latest Posts

ಕೊರೋನಾ ಸೋಂಕಿಗೆ ಹಿರಿಯ ಪತ್ರಕರ್ತ ಸುನಿಲ್ ಜೈನ್ ನಿಧನ: ಪ್ರಧಾನಿ ಮೋದಿ ಸಂತಾಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿಗೆ ತುತ್ತಾಗಿದ್ದ ಫೈನಾನ್ಷಿಯಲ್ ಎಕ್ಸ್ ಪ್ರೆಸ್ ನ ವ್ಯವಸ್ಥಾಪಕ ಸಂಪಾದಕ ಸುನಿಲ್ ಜೈನ್ ನಿಧನರಾಗಿದ್ದಾರೆ.

ಈ ಬಗ್ಗೆ ಸುನಿಲ್ ಅವರ ಸಹೋದರಿ ಸಂಧ್ಯಾ ಜೈನ್ ಟ್ವೀಟ್ ಮಾಡಿದ್ದು, ನನ್ನ ಸಹೋದರ ಸುನಿಲ್ ಜೈನ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಏಮ್ಸ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವೀರರಂತೆ ಹೋರಾಡಿದ್ದಾರೆ. ಆದರೆ ರಾಕ್ಷಸ ಕೊರೋನಾ ಇನ್ನಷ್ಟು ಶಕ್ತಿಶಾಲಿಯಾಗಿಬಿಟ್ಟಿದೆ. ತೀರ್ಥಂಕರರು ಅವರ ಮುಂದಿನ ಪ್ರಯಾಣಕ್ಕೆ ದಾರಿತೋರಲಿ. ಈ ದಿನದಂದು ನಮ್ಮೊಂದಿಗೆ ನಿಂತಿರುವ ಎಲ್ಲರಿಗೂ ನಮ್ಮ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಸುನಿಲ್ ಜೈನ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ನೀವು ಬೇಗನೆ ನಮ್ಮನ್ನು ತೊರೆದಿದ್ದೀರಿ ಸುನಿಲ್ ಜೈನ್. ನಾನು ನಿಮ್ಮ ಅಂಕಣಗಳನ್ನು ಓದುವುದನ್ನು ತಪ್ಪಿಸಿಕೊಳ್ಳುತ್ತೇನೆ. ನೀವು ಸ್ಪೂರ್ತಿದಾಯಕ ಕೆಲಸವನ್ನು ಬಿಟ್ಟು ಹೋಗಿದ್ದೀರಾ. ನಿಮ್ಮ ನಿಧನದೊಂದಿಗೆ ಪತ್ರಿಕೋದ್ಯಮ ಬಡವಾಗಿದೆ. ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತಿದ್ದೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ದಶಕಗಳ ಕಾಲ ಫಿನಾನ್ಷಿಯಲ್ ಎಕ್ಸ್ ಪ್ರೆಸ್ ನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸುನಿಲ್ ಅವರು 1991ರಲ್ಲಿ ಇಂಡಿಯಾ ಟುಡೇ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದರು. ನಂತರ ಅವರು ಇಂಡಿಯನ್ ಎಕ್ಸ್ ಪ್ರೆಸ್, ಫೈನಾನ್ಷಿಯಲ್ ಎಕ್ಸ್ ಪ್ರೆಸ್, ಬ್ಯುಸಿನೆಸ್ ಸ್ಟ್ಯಾಂಡರ್ಡ್ ನಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss