ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಅವರೊಂದಿಗೆ ಉಡುಪಿ ಕೃಷ್ಣಮಠಕ್ಕೆ ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಭೇಟಿ ನೀಡಿ ಶ್ರೀಕೃಷ್ಣನ ದರುಶನ ಪಡೆದಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ನಟ ಎನ್‌ಟಿಆರ್, 40 ವರ್ಷದಿಂದ ನನ್ನ ಅಮ್ಮನಿಗೆ ಒಂದು ಆಸೆ ಇತ್ತು. ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬುದು. ಅಮ್ಮನ ಆಸೆ ಇಂದು ಈಡೇರಿದೆ ಎಂದು ಹೇಳಿದ್ದಾರೆ.
ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ಇದೆಲ್ಲವೂ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ ಎಂದಿದ್ದಾರೆ.
ಗೆಳೆಯ ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟು ದೇವರು ಕೊಟ್ಟ ಗೆಳೆಯ. ಆ ಗೆಳೆಯನೊಂದಿಗೆ ನಾನಿಂದು ಕೃಷ್ಣಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ. ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ನಾನು ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ. ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ರಿಷಬ್‌ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿಯಾಗಿದೆ. ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದು ಸಂತೋಷಪಟ್ಟರು.
ರಿಷಬ್ ಶೆಟ್ಟಿ ಮಾತನಾಡಿ. ಜೂ.ಎನ್‌ಟಿಆರ್ ಜೊತೆ ಅಣ್ಣ-ತಮ್ಮನ ಸಂಬಂಧ ಫೀಲ್ ಆಗುತ್ತಿದೆ. ಅವರ ಆಂಧ್ರಪ್ರದೇಶದವರು ಎಂಬ ಭಾವನೆ ಬರೋದಿಲ್ಲ. ಬಹಳ ಸಮಯದ ನಂತರ ಭೇಟಿಯಾಗುವ ಅವಕಾಶ ಸಿಕ್ಕಿತು. ಇತ್ತೀಚೆಗೆ ಉಡುಪಿ ಮಠಕ್ಕೆ ಬರಬೇಕು ಎಂದು ಹೇಳಿಕೊಂಡಿದ್ದರು. ನಾನು ಈ ಕಡೆಗೆ ಇದ್ದೆ ಹಾಗಾಗಿ ಅವರೊಂದಿಗೆ ಜೊತೆಯಾಗಿ ಮಠಕ್ಕೆ ಬಂದೆ. ಉಡುಪಿ ಅಷ್ಟಮಿಗೆ ಬರಬೇಕಾಗಿತ್ತು ಆದರೆ ಸಾಧ್ಯವಾಗಿರಲಿಲ್ಲ. ಎನ್‌ಟಿಆರ್ ಕುಟುಂಬದ ಜೊತೆ ಬಂದಿರೋದು ಖುಷಿಯಾಗಿದೆ ಎಂದರು.