ರಾಮನವಮಿ, ಹನುಮಜಯಂತಿ ಕೋಮುಗಲಭೆ ಪ್ರಕರಣಗಳ ನ್ಯಾಯಾಂಗ ತನಿಖೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಮನವಮಿ ಮತ್ತು ಹನುಮಜಯಂತಿಗಳಂದು ದೇಶದಾದ್ಯಂತ ನಡೆದ ಕೋಮು ಗಲಭೆಗಳ ಕುರಿತು ನ್ಯಾಯಾಂಗ ತನಿಖೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ನಡೆಸುವಂತೆ ಅನೇಕ ಸಾರ್ವಜನಿಕ ಹಿತಾಸಕ್ತಿ ದಾವೆ(ಪಿಐಎಲ್‌) ಗಳು ಸಲ್ಲಿಕೆಯಾಗಿದ್ದವು.

ಆದರೆ ಇವುಗಳನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್‌ “ನ್ಯಾಯಾಲಯದಿಂದ ನೀಡಲಾಗದ ಪರಿಹಾರಗಳನ್ನು ಕೇಳಬೇಡಿ” ಎಂದು ಅರ್ಜಿದಾರರಿಗೆ ಹೇಳಿದೆ.

ದೇಶದಾದ್ಯಂತ ರಾಮನವಮಿ ಮತ್ತು ಹನುಮಜಯಂತಿಯಂದು ಹಲವಾರು ಕಡೆಗಳಲ್ಲಿ ಕೋಮುಸಂಘರ್ಷನಡೆದಿತ್ತು. ಅದರಲ್ಲೂ ಜಹಾಂಗೀರ್‌ ಪುರಿಯಲ್ಲಿ ನಡೆದ ಗಲಭೆಯು ದೇಶದಾದ್ಯಂತ ಸದ್ದು ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!