Monday, August 15, 2022

Latest Posts

ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದು ನಾವೇ: ಹೊಣೆ ಹೊತ್ತಿಕೊಂಡಿದೆ ಉಗ್ರ ಸಂಘಟನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಉದ್ಯಮಿ ಮುಖೇಶ್​ ಅಂಬಾನಿ ಮನೆಯ ಬಳಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ ಇದರ ಹೊಣೆ ಹೊತ್ತುಕೊಂಡಿದೆ.

ಟೆಲಿಗ್ರಾಮ್ ಸಂದೇಶದ ಮೂಲಕ ಸಂಘಟನೆ “ಅಂಬಾನಿ ನಿವಾಸದ ಬಳಿ ಸ್ಫೋಟಕಗಳನ್ನು ಇಟ್ಟಿದ್ದು ನಾವು’ ಎಂದು ಘೋಷಿಸಿಕೊಂಡಿದೆ.

ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ಎಸ್‌ಯುವಿ ಇರಿಸಿದ ಸಹೋದರ ಮನೆಗೆ ಸುರಕ್ಷಿತವಾಗಿ ತಲುಪಿದ್ದಾನೆ. “ಇದು ಟ್ರೇಲರ್ ಮಾತ್ರ, ಬಿಗ್ ಸಿನಿಮಾ ಬರಲಿದೆ” ಎಂದು ಟೆಲಿಗ್ರಾಮ್’ನ ಸಂದೇಶದಲ್ಲಿ ಹೇಳಲಾಗಿದೆ.

ಅಂಬಾನಿಯ ನಿವಾಸವಾದ ಬಳಿ ಕಳೆದ ಗುರುವಾರ ಬೆಳಗ್ಗೆ ಸ್ಕಾರ್ಪಿಯೋ ಕಾರ್​ ಪತ್ತೆಯಾಗಿತ್ತು. ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಬಂದು ಪರಿಶೀಲಿಸಿದಾಗ ಕಾರ್​ನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಆದರೆ ಅದನ್ನ ಅಸೆಂಬಲ್ ಮಾಡಿರಲಿಲ್ಲ. ಮೇಲ್ನೋಟಕ್ಕೆ ಬೆದರಿಕೆ ಒಡ್ಡುವ ಸಲುವಾಗಿ ಈ ರೀತಿ ಮಾಡಿರುವಂತೆ ತೋರಿದೆ ಎಂದು ಪೊಲೀಸರು ಶಂಕಿಸಿದ್ದರು.

ಇನ್ನು ಈ ಕೃತ್ಯಕ್ಕಾಗಿ ಎರಡು ಕಾರ್​ಗಳನ್ನ ಬಳಕೆ ಮಾಡಲಾಗಿತ್ತು. ಒಂದು ಬಿಳಿ ಬಣ್ಣದ ಇನ್ನೋವಾ ಮತ್ತೊಂದು ಹಸಿರು ಬಣ್ಣ ಸ್ಕಾರ್ಪಿಯೋ. ಎರಡೂ ಕಾರುಗಳು ಥಾಣೆ ಅಥವಾ ನೆರೆಯ ಪ್ರದೇಶದಿಂದ ಮುಖೇಶ್ ಅಂಬಾನಿಯ ನಿವಾಸ ಆಂಟಿಲಿಯಾಕ್ಕೆ ಬಂದಿವೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss