Saturday, August 13, 2022

Latest Posts

ಮೂರನೇ ಬಾರಿ ಕೆನಡಾ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ಜಸ್ಟಿನ್ ಟ್ರುಡೋ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೆನಡಾದ ಲಿಬರಲ್ ಪಕ್ಷದ ಜಸ್ಟಿನ್ ಟ್ರುಡೋ  ಮೂರನೇ ಬಾರಿ ಪ್ರಧಾನ ಮಂತ್ರಿ ಪಟ್ಟ ಅಲಂಕರಿಸುತ್ತಿದ್ದಾರೆ.
ಸಂಸದೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಜಸ್ಟಿನ್ ಟುಡ್ರೋ ಬರೋಬ್ಬರಿ 148 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ಕನ್ಸರ್ವಟಿವ್ ಪಕ್ಷಕ್ಕೆ 108, ಕ್ವೆಬೆಕ್ ಆಧಾರಿತ ಬ್ಲಾಕ್ ಕ್ವೆಬೆಕಿಯನ್ನರು 28 ಹಾಗೂ ಎಡಪಕ್ಷಗಳು 22 ಸ್ಥಾನ ಪಡೆದುಕೊಂಡಿವೆ.
2009ರಲ್ಲಿ ಜಸ್ಟಿನ್ ಟ್ರುಡೋ ಲಿಬರಲ್ ಪಕ್ಷದ ವಕ್ತಾರರಾಗಿ ಆಯ್ಕೆಯಾಗಿದ್ದರು, ಇವರ ಕೆಲಸಗಳನ್ನು ಮೆಚ್ಚಿದ ಜನತೆ ಇವರನ್ನು ನಾಯಕನನ್ನಾಗಿ ಮಾಡಿದರು.
ಬಳಿಕ 2015ರ ಚುನಾವಣೆಯಲ್ಲಿ 184 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ  ಮೂಲಕ ಪ್ರಧಾನಿಯಾದರು. ಇದೀಗ ಕೋವಿಡ್ ಸಮಯದ ಹೋರಾಟಕ್ಕೆ ಮೆಚ್ಚಿದ ಜನತೆ ಮತ್ತೆ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಜಸ್ಟಿನ್ ಟ್ರುಡೋ, ಲಿಬರಲ್ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ್ದಕ್ಕಾಗಿ ಕೆನಡಾ ಜನತೆಗೆ ಧನ್ಯವಾದಗಳು. ನಾವು ಕೋವಿಡ್ ವಿರುದ್ಧದ ಹೋರಾಟವನ್ನು ಮುಗಿಸಿ, ಕೆನಡಾವನ್ನು ಮುಂದೆ ನಡೆಸಲಿದ್ದೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss