Sunday, April 11, 2021

Latest Posts

ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಗೆ ಖ್ಯಾತ ಪುರಾತತ್ತ್ವಜ್ಞ ಪದ್ಮಶ್ರೀ ಕೆ.ಕೆ. ಮುಹಮ್ಮದ್ ಆಯ್ಕೆ

ಹೊಸದಿಗಂತ ವರದಿ, ಉಡುಪಿ:

ಇಲ್ಲಿನ ಡಾ. ಪಾದೂರು ಗುರುರಾಜ ಭಟ್ ಟ್ರಸ್ಟ್ ನೀಡುವ ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ 2021ಕ್ಕೆ ಅಯೋಧ್ಯಾದಲ್ಲಿ ಉತ್ಖನನ ಮಾಡಿ ಸತ್ಯಾಂಶ ಬಹಿರಂಗ ಪಡಿಸಿದ ಖ್ಯಾತ ಪುರಾತತ್ತ್ವಜ್ಞ ಪದ್ಮಶ್ರೀ ಕೆ.ಕೆ. ಮುಹಮ್ಮದ್ ಆಯ್ಕೆಯಾಗಿದ್ದಾರೆ.

ಟ್ರಸ್ಟ್‌ನ ಅಧ್ಯಕ್ಷ ಪ್ರೊ. ಪಿ. ಶ್ರೀಪತಿ ತಂತ್ರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಕರಾವಳಿಯ ಇತಿಹಾಸಜ್ಞ ಪಾದೂರು ಗುರುರಾಜ ಭಟ್ ಅವರ ನೆನಪಿನಲ್ಲಿ ನೀಡುವ ಈ ಪ್ರಶಸ್ತಿಯು ಈ ಬಾರಿಯಿಂದ 1ಲಕ್ಷ ರೂ. ನಗದು ಮೊತ್ತವನ್ನು ಹೊಂದಿದೆ. ಚಿದಾನಂದ ಮೂರ್ತಿ, ಎನ್. ಜಯರಾಂ, ಎ. ಸುಂದರ ಅಡಿಗ, ಎ.ವಿ. ನರಸಿಂಹಮೂರ್ತಿ ಅವರಿಗೆ ಈಗಾಗಲೇ ಪ್ರಶಸ್ತಿ ನೀಡಲಾಗಿದೆ ಎಂದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಫೆ. 28ರಂದು ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿದೆ. ಬೆಳಗ್ಗೆ 9ಗಂಟೆಗೆ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುತ್ತಾರೆ.

ಶಾಸಕ ರಘುಪತಿ ಭಟ್ ಮುಖ್ಯ ಅತಿಥಿಗಳಾಗಿದ್ದು, ಕೆ.ಕೆ. ಮುಹಮ್ಮದ್ ಅಯೋಧ್ಯಾ ಉತ್ಖನನ ಹಾಗೂ ಮಧ್ಯಪ್ರದೇಶ ಮತ್ತು ಜಾರ್ಖಂಡ್ ಉತ್ಖನನದ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾರೆ. ಮಧ್ಯಾಹ್ನ 12.15ಕ್ಕೆ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನಿಸುತ್ತಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರೊ. ಕೆ. ಭೈರಪ್ಪ ಮುಖ್ಯ ಅತಿಥಿಗಳಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಕೋಶಾಧಿಕಾರಿ ಪರಶುರಾಮ ಭಟ್, ಸದಸ್ಯರಾದ ಯು. ರಘುಪತಿ ರಾವ್, ಪಿ. ವೆಂಕಟೇಶ್ ಭಟ್, ಹಿತೈಷಿಗಳಾದ ವಾಸುದೇವ ಭಟ್ ಪೆರಂಪಳ್ಳಿ, ಎಸ್.ವಿ. ಭಟ್ ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss