ಹೊಸದಿಗಂತ ವರದಿ, ಉಡುಪಿ:
ರಾಮ ಜನ್ಮಭೂಮಿ ಅಯೋಧ್ಯಾದಲ್ಲಿ ಉತ್ಖನನ ಮಾಡಿ ಸತ್ಯಾಂಶ ಬಹಿರಂಗ ಪಡಿಸಿದ ಖ್ಯಾತ ಪುರಾತತ್ವಜ್ಞ ಪದ್ಮಶ್ರೀ ಕೆ.ಕೆ. ಮುಹಮ್ಮದ್ ಅವರಿಗೆ ಉಡುಪಿ ಡಾ. ಪಾದೂರು ಗುರುರಾಜ ಭಟ್ ಟ್ರಸ್ಟ್ ನೀಡುವ ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾನುವಾರ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಕರಾವಳಿಯ ಇತಿಹಾಸಜ್ಞ ಪಾದೂರು ಗುರುರಾಜ ಭಟ್ ಅವರ ನೆನಪಿನಲ್ಲಿ ನೀಡುವ 1ಲಕ್ಷ ರೂ. ನಗದು ಮೊತ್ತದ ಪ್ರಶಸ್ತಿಯನ್ನು ಡಾ. ಕೆ.ಕೆ. ಮುಹಮ್ಮದ್ ಅವರಿಗೆ ಪ್ರದಾನಿಸಿದರು.
ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರೊ. ಕೆ. ಭೈರಪ್ಪ ಭಾಗವಹಿಸಿದ್ದರು. ಗುರುರಾಜ್ ಭಟ್ಟರ ಪತ್ನಿ ಪಿ. ಪಾರ್ವತಿ ಭಟ್ ಉಪಸ್ಥಿತರಿದ್ದರು.
ಟ್ರಸ್ಟ್ನ ಅಧ್ಯಕ್ಷ ಪ್ರೊ. ಪಿ. ಶ್ರೀಪತಿ ತಂತ್ರಿ ಸ್ವಾಗತಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.