ಕೆ.ಎಲ್. ರಾಹುಲ್ ಮನೆಯಲ್ಲಿ ಮದುವೆ ಸಂಭ್ರಮ, ಭರ್ಜರಿ ತಯಾರಿ ವಿಡಿಯೋ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತ್ತೊಮ್ಮೆ ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದಲ್ಲಿ ಮದುವೆ ಸಂಭ್ರಮ ಹೆಚ್ಚಾಗಿದೆ. ಬಾಲಿವುಡ್ ನಟಿ, ಸುನೀಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ಮದುವೆಗೆ ಮನೆಯೆಲ್ಲಾ ಸಜ್ಜಾಗಿದೆ. ಜನವರಿ 23 ರಂದು ಇಬ್ಬರ ಮದುವೆ ತಯಾರಿ ಜೋರಾಗಿದ್ದು, ಮನೆಯೆಲ್ಲಾ ಬೆಳಕುಮಯವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿರಾಮ ತೆಗೆದುಕೊಂಡಿದ್ದಾರೆ, ಖಾಸಗಿ ಕಾರ್ಯಕ್ರಮಕ್ಕಾಗಿ ಪಂದ್ಯಕ್ಕೆ ಅಲಭ್ಯ ಎನ್ನಲಾಗಿದೆ. ಸುನೀಲ್ ಶೆಟ್ಟಿ ಫಾರ್ಮ್ ಹೌಸ್‌ನಲ್ಲಿ ಮದುವೆಗೆ ತಯಾರಿ ನಡೆದಿದೆ. ಕೆ.ಎಲ್ ರಾಹುಲ್ ಅವರ ಮನೆಗೆ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಈ ಫೋಟೊ, ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಮದುವೆ ಮುಂಚಿನ ಕಾರ್ಯಕ್ರಮಗಳಿಗೆ ತಯಾರಿ ನಡೆದಿದೆ.

https://www.instagram.com/reel/Cng9nOlh9tP/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!