ಕೆ-ಪಾಪ್ ಆಸ್ಟ್ರೋ ಗ್ರೂಪ್ ಸದಸ್ಯ ಮೂನ್‌ಬಿನ್ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಾದ್ಯಂತ ದಕ್ಷಿಣ ಕೊರಿಯಾದ ಕೆ-ಪಾಪ್‌ಗಳು ಪ್ರಸಿದ್ಧಿ ಹೊಂದಿವೆ. ಬಿಟಿಎಸ್ ರೀತಿಯ ಮತ್ತೊಂದು ಪ್ರಸಿದ್ಧವಾದ ಬ್ಯಾಂಡ್ ಆಸ್ಟ್ರೋ ಸದಸ್ಯ ಮೂನ್‌ಬಿನ್ ನಿಧನರಾಗಿದ್ದಾರೆ.

ಸಿಯೋಲ್‌ನ ಗಂಗ್ನಮ್‌ನಲ್ಲಿನ ಮನೆಯಲ್ಲಿ ಮೂನ್‌ಬಿನ್ ಶವವಾಗಿ ಪತ್ತೆಯಾಗಿದ್ದಾರೆ. ಮೂನ್‌ಬಿನ್ ಮ್ಯಾನೇಜರ್ ಮನೆಯ ಬಾಗಿಲು ತೆರೆದಾಗ ಮೂನ್‌ಬಿನ್ ಮೃತಪಟ್ಟಿರುವುದು ತಿಳಿದುಬಂದಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮೂನ್‌ಬಿನ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಭಿಮಾನಿಗಳನ್ನು ಸಾಕಷ್ಟು ಇಷ್ಟಪಡುತ್ತಿದ್ದ ಮೂನ್‌ಬಿನ್ ಸಾವಿರ ದಕ್ಷಿಣ ಕೊರಿಯಾ ಕಣ್ಣೀರಿಟ್ಟಿದೆ. ಕೇವಲ 25 ವರ್ಷದ ಮೂನ್‌ಬಿನ್ ಮೃತಪಟ್ಟಿದ್ದು ಹೇಗೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!