Monday, July 4, 2022

Latest Posts

ಜೂನ್ 21ರಂದು ಕೆ.ಆರ್. ಕ್ಷೇತ್ರದಲ್ಲಿ ಲಸಿಕಾ ಅಭಿಯಾನ: ಶಾಸಕ ಎಸ್.ಎ.ರಾಮದಾಸ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಂಗತ ವರದಿ, ಮೈಸೂರು:

ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ಜೂನ್ 16 ಹಾಗೂ 17 ರಂದು ನಡೆಯುತ್ತಿರುವ ಸಂಪೂರ್ಣ ಕೋವಿಡ್ ಪರೀಕ್ಷೆ ಹಾಗೂ ಜೂನ್ 21 ರಂದು ನಡೆಯಲಿರುವ ಲಸಿಕಾ ಅಭಿಯಾನದ ಕುರಿತು ಕ್ಷೇತ್ರದ 19 ವಾರ್ಡ್ ಗಳಲ್ಲೂ ಪೂರ್ವಸಿದ್ಧತಾ ಸಭೆಗಳನ್ನು ಶಾಸಕ ಎಸ್.ಎ.ರಾಮದಾಸ್ ನಡೆಸಿದರು.
ವಿದ್ಯಾರಣ್ಯಪುರಂನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಇಂತಹ ಅಭಿಯಾನ ನಡೆದಿಲ್ಲ. ಕೆ.ಆರ್ ಕ್ಷೇತ್ರದ ವ್ಯಾಪ್ತಿಗೆ ಬರುವ 270 ಬೂತ್ ಗಳಲ್ಲಿ, 100 ಕೇಂದ್ರಗಳಲ್ಲಿ ಈ ಅಭಿಯಾನ ನಡೆಯಲಿದೆ. ಕೆ.ಆರ್ ಕ್ಷೇತ್ರವನ್ನ ಕೊರೋನಾ ಮುಕ್ತ ಮಾಡಬೇಕೆಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಇದಕ್ಕೆ ನಾವೆಲ್ಲರೂ ಶ್ರಮ ವಹಿಸಬೇಕು ಎಂದು ತಿಳಿಸಿದರು.
ನಮ್ಮ ಮನೆಯ ಬಳಿಯಲ್ಲಿರುವವರನ್ನು ಹಾಗೂ ಜನರನ್ನು ಕರೆತರುವ ಕೆಲಸವಾಗಬೇಕು. ಇದಕ್ಕಾಗಿಯೇ ನಾವು ಪೇಜ್ ಪ್ರಮುಖರನ್ನು(ಮತದಾರರ ಪಟ್ಟಿಯಲ್ಲಿ ಇರುವ ಒಂದೊAದು ಪೇಜ್ ಗಳಿಗೆ ಪ್ರಮುಖರೆಂದು ನೇಮಕಾತಿ ಮಾಡಲಾಗಿರುತ್ತದೆ) ಮಾಡಿದ್ದೇವೆ. ಅವರಿಗೆ ಒಂದು ಹಂತದ ಟ್ರೆöÊನಿಂಗ್‌ನ್ನೂ ಕೂಡ ನೀಡಿದ್ದೇವೆ. ಈಗಾಗಲೇ ಸಾಕಷ್ಟು ಜನ ಪೇಜ್ ಪ್ರಮುಖರು, ಅವರ ಪೇಜ್ ನಲ್ಲಿ ಬರುವ ಮನೆಗಳಿಗೆ ಸಂಪರ್ಕ ಮಾಡಿ, ವಿಷಯಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ಮೋದಿಯವರ ಆಶಯದಂತೆ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಲಸಿಕೆಯನ್ನು ದೇಶಾದ್ಯಂತ ನೀಡಲಾಗುವುದು ಎಂದು ತಿಳಿಸಿದ್ದಾರೆ. ಜೂನ್ 16 ಮತ್ತು 17 ರಂದು ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡವರು, ಅಂದೇ ಲಸಿಕೆಗೆ ರಿಜಿಸ್ಟರ್ ಮಾಡಿರುತ್ತಾರೆ. ಜೂನ್ 21 ರಿಂದ ಆಯಾ ಬೂತ್ ಗಳಲ್ಲಿ ರಿಜಿಸ್ಟರ್ ಆದವರಿಗೆ ಲಸಿಕೆ ನೀಡಲಾಗುತ್ತದೆ. ಪ್ರತಿಯೊಬ್ಬರು ತಪಾಸಣೆಗೆ ಬಂದರೆ, ಬೇಗ ಕೋವಿಡ್ ಪತ್ತೆಗೆ ಸಹಕಾರಿಯಾಗಲಿದೆ. ಈ ಮೂಲಕ ನಗರವನ್ನ ಕೋವಿಡ್ ಮುಕ್ತ ಮಾಡಬಹುದು ಹಾಗೂ ನಮ್ಮ ಹೆಜ್ಜೆ ನಿಮ್ಮ ಆರೋಗ್ಯದ ಕಡೆಗೆ ಎಂಬ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸದರಿ ಕಾರ್ಯಕ್ರಮಗಳಲ್ಲಿ ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು, ನಗರಪಾಲಿಕಾ ಸದಸ್ಯರು, ಬಿ.ಎಲ್.ಓ ಗಳು, ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss