ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ ವಿಡಿಯೋ ವೈರಲ್: ಕ್ರೀಡಾಭಿಮಾನಿಗಳ ಆಕ್ರೋಶ ಸ್ಫೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ ಬಡಿಸಿದ ಘಟನೆ ಉತ್ತರ ಪ್ರದೇಶದ ಸಹರಾನ್‌ ಪುರದಲ್ಲಿ ನಡೆದಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕ್ರೀಡಾಭಿಮಾನಿಗಳ ಆಕ್ರೋಶ ಸ್ಫೋಟಗೊಂಡಿದೆ.
ವ್ಯಾಪಕ ಪ್ರಚಾರದಲ್ಲಿರುವ ಈ ವೀಡಿಯೊಗಳನ್ನು ಸೆಪ್ಟೆಂಬರ್ 16 ರಂದು ಸಹರಾನ್‌ಪುರದಲ್ಲಿ ನಡೆದಿದ್ದ ಬಾಲಕಿಯರ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಸಂದರ್ಭದಲ್ಲಿ ಕೆಲವು ಆಟಗಾರ್ತಿಯರು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.
ಒಂದು ನಿಮಿಷದ ವೀಡಿಯೋದಲ್ಲಿ, ಆಹಾರ ಸೇವಿಸಿಸುತ್ತಿರುವ ಆಟಗಾರ್ತಿಯರ ಹಿನ್ನೆಲೆಯಲ್ಲಿ ಮೂತ್ರಾಲಯಗಳು ಮತ್ತು ವಾಶ್ ಬೇಸಿನ್‌ಗಳನ್ನು ಗಮನಿಸಬಹುದು. ಟ್ಯಾಯ್ಲೆಟ್‌ ನಲ್ಲಿ ಇರಿಸಲಾದ ತಟ್ಟೆಯಿಂದ ಆಟಗಾರ್ತಿಯರು ಅನ್ನ ಹಾಗೂ ಪಲ್ಯವನ್ನು ಬಡಿಸಿಕೊಂಡು ಹೊರಬರುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಆಹಾರ ಪಾತ್ರೆಗಳ ಪಕ್ಕದಲ್ಲಿ ಒಂದು ಕಾಗದದ ಮೇಲೆ ಪೂರಿಯನ್ನು ಇಡಲಾಗಿದೆ.

ಈ ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ವಿವಾದದ ಬಳಿಕ ರಾಜ್ಯ ಸರ್ಕಾರವು ಸಹರಾನ್‌ಪುರ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಅವರನ್ನು ಅಮಾನತುಗೊಳಿಸಿದೆ.
”ಮಳೆಯಾಗುತ್ತಿದ್ದರಿಂದ ಈಜುಕೊಳ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ, ಈಜುಕೊಳದ ಪಕ್ಕದಲ್ಲಿ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಆಹಾರ ಇಡಲಾಗಿತ್ತು, ಕ್ರೀಡಾಂಗಣದಲ್ಲಿ ಕೆಲ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಆಹಾರ ಇಡಲು ಬೇರೆ ಸ್ಥಳ ಇರಲಿಲ್ಲʼ. ಎಂದು ಅನಿಮೇಶ್ ಸಕ್ಸೇನಾ ಈ ಹಿಂದೆ ಸಮರ್ಥಿಸಿಕೊಂಡಿದ್ದರು.
“ಕೆಟ್ಟ ವ್ಯವಸ್ಥೆಗಳ ಬಗ್ಗೆ ದೂರುಗಳಿವೆ. ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ನಾನು ತನಿಖೆಗೆ ಆದೇಶಿಸಿದ್ದೇನೆ ಮತ್ತು ಸಂಬಂಧಿಸಿದವರು ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸುತ್ತಾರೆ. ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸಹರಾನ್‌ಪುರದ ಜಿಲ್ಲಾಧಿಕಾರಿ ಅಖಿಲೇಶ್ ಸಿಂಗ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!