CINE NEWS | ಅಪ್ಪು ಜನ್ಮದಿನದಂದು ಕಬ್ಜ ಸಿನಿಮಾ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲೆಡೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಕಬ್ಜ ಸಿನಿಮಾ ಮಾರ್ಚ್ 17 ರಂದು ತೆರೆಕಾಣಲಿದೆ.
ಪುನೀತ್ ರಾಜ್‌ಕುಮಾರ್ ಜನ್ಮದಿನದಂದು ಕಬ್ಜ ರಿಲೀಸ್‌ಗೆ ತಯಾರಿ ನಡೆದಿದ್ದು, ವಿಶ್ವದಾದ್ಯಂತ ಅದ್ಧೂರಿಯಾಗಿ ಸಿನಿಮಾ ಬಿಡುಗಡೆಯಾಗುತ್ತಿದೆ.

ಆರ್. ಚಂದ್ರು ನಿರ್ದೇಶದಲ್ಲಿ ಮೂಡಿಬರ‍್ತಿರೋ ಸಿನಿಮಾದಲ್ಲಿ ಸುದೀಪ್ ಹಾಗೂ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ಮಿಂಚಲಿದ್ದಾರೆ. ಕಬ್ಜ ಸಿನಿಮಾ ಬಗ್ಗೆ ಪುನೀತ್ ಅವರು ಅಪಾರ ಆಸಕ್ತಿ ತೋರಿಸಿದ್ದರು. ತುಣುಕುಗಳನ್ನು ತೋರಿಸಿದಾಗ, ಇದು ಹಾಲಿವುಡ್ ಮೂವಿ ಥರ ಇದೆ ಎಂದು ಪುನೀತ್ ಹೇಳಿದ್ದರು ಎಂದು ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆ ತಿಳಿಸಿದೆ.

ಪುನೀತ್ ಅವರ ಹುಟ್ಟುಹಬ್ಬದಂದೇ ಸಿನಿಮಾ ರಿಲೀಸ್ ಮಾಡೋದು ನಮ್ಮ ಆಸೆ, ಅವರ ಜನ್ಮದಿನಕ್ಕೆ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಬೀಳಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!