Monday, October 2, 2023

Latest Posts

ತೆರೆದ ಕೊಳವೆ ಬಾವಿಗೆ ಬಿದ್ದ ಕಂದಮ್ಮ, ಮಗುವಿನ ರಕ್ಷಣೆಗಾಗಿ ಹರಸಾಹಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಮುಗವಲಿ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದಿದೆ.

300 ಅಡಿ ಕೊಳವೆ ಬಾವಿ ಇದಾಗಿದ್ದು, 20 ಅಡಿಯಲ್ಲಿ ಮಗು ಸೃಷ್ಟಿ ಸಿಲುಕಿಕೊಂಡಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮಗುವನ್ನು ಹೊರತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

ಜೆಸಿಬಿ ಹಾಗೂ ಪೋಕ್ಲಾನ್ ಯಂತ್ರದ ಸಹಾಯದಿಂದ ಅಗೆಯಲಾಗಿದ್ದು, ಮಗುವಿನ ಚಲನವಲನಗಳ ಮೇಲೆ ಸಿಸಿ ಕ್ಯಾಮೆರಾ ಮೂಲಕ ನಿಗಾ ಇಡಲಾಗಿದೆ. ಮನೆಯ ಸಮೀಪದಲ್ಲೇ ಇದ್ದ ಹೊಲದಲ್ಲಿ ಆಟವಾಡುವಾಗ ಮಗು ಕಾಲು ಜಾರಿ ಬಾವಿಯೊಳಗೆ ಬಿದ್ದಿದೆ.

ಸುರಂಗ ಮಾರ್ಗದ ಮೂಲಕ ಬಾಲಕಿಯನ್ನು ತಲುಪುವ ಪ್ರಯತ್ನ ನಡೆಯುತ್ತಿದ್ದು, ಪೈಪ್ ಮೂಲಕ ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ. ಮಗು ಏನು ಮಾಡುತ್ತಿದೆ ಹಾಗೂ ಮಗುವಿನ ಉಸಿರಾಟದ ಬಗ್ಗೆ ಗಮನ ಹರಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ವೇಗಗೊಳಿಸುವಂತೆ ಸಿಎಂ ಶಿವರಾಜ್ ಚೌಹಾಣ್ ಸೂಚನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!