ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಿಸ್ಕೆಟ್ ಕಾರ್ಖಾನೆಯೊಂದರಲ್ಲಿಯಂತ್ರದ ಬೆಲ್ಟ್‌ಗೆ ಸಿಲುಕಿ ಮೂರು ವರ್ಷದ ಮಗು ಮೃತಪಟ್ಟಿದೆ.
ಥಾಣೆ ಜಿಲ್ಲೆಯ ಅಂಬರನಾಥದಲ್ಲಿ ಆಯುಷ್ ಚೌಹಾಣ್ ಎಂಬ ಮೂರು ವರ್ಷದ ಮಗು ತನ್ನ ತಾಯಿಯೊಂದಿಗೆ ಬಿಸ್ಕೆಟ್ ಫ್ಯಾಕ್ಟರಿಗೆ ಹೋಗಿದ್ದನು. ಈ ವೇಳೆ ಮಗುವನ್ನು ಒಂದು ಕಡೆ ಕೂರಿಸಿ, ಮಗುವಿನ ತಾಯಿ ತನ್ನ ಪತಿಗೆ ಉಪಾಹಾರ ಕೊಟ್ಟುಬರಲು ತೆರಳಿದ್ದರು.
ಈ ವೇಳೆ ಯಂತ್ರದಲ್ಲಿದ್ದ ರಾಶಿ ರಾಶಿ ಬಿಸ್ಕೆಟ್ ನೋಡಿದೆ. ಒಂದೇ ಒಂದು ಬಿಸ್ಕೆಟ್ ತೆಗೆದುಕೊಳ್ಳಲು ಕೈಹಾಕಿದೆ. ಆದ್ರೆ ಬೆಲ್ಟ್‌ಗೆ ಕೈ ಸಿಕ್ಕಿಕೊಂಡಿದೆ. ಕೂಡಲೇ ಕಾರ್ಖಾನೆ ಸಿಬ್ಬಂದಿ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಾಗಲೇ ಮಗು ಮೃತಪಟ್ಟಿದೆ.