Wednesday, July 6, 2022

Latest Posts

ಕಾಕತೀಯ ರುದ್ರೇಶ್ವರ ರಾಮಪ್ಪ ದೇವಸ್ಥಾನಕ್ಕೆ ‘ವಿಶ್ವ ಪಾರಂಪರಿಕ ತಾಣ’ ಮನ್ನಣೆ: ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕಾಕತೀಯ ವಂಶದ ರಾಜರಿಂದ ಅತಿವಿಶಿಷ್ಟವಾಗಿ ನಿರ್ಮಾಣಗೊಂಡಿರುವ ಕಾಕತೀಯ ರುದ್ರೇಶ್ವರ ರಾಮಪ್ಪ ದೇವಸ್ಥಾನವು ಸ್ಥಾನ ಪಡೆದಿದ್ದು, ಯುನೆಸ್ಕೊ ಈ ದೇವಸ್ಥಾನದ ವೈಶಿಷ್ಟವನ್ನು ಪರಿಗಣಿಸಿ ‘ವಿಶ್ವ ಪಾರಂಪರಿಕ ತಾಣ’ ಎಂಬ ಮನ್ನಣೆಯನ್ನು ನೀಡಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಸಾರ್ವಜನಿಕರು ಈ ದೇವಸ್ಥಾನಕ್ಕೆ ತೆರಳಿ ಅಲ್ಲಿನ ವಿಶೇಷತೆಯನ್ನು ನೋಡಿ ಆನಂದಿಸಬೇಕು ಎಂದೂ ಹೇಳಿದ್ದಾರೆ.
ತೆಲಂಗಾಣದಲ್ಲಿರುವ ಈ ದೇವಸ್ಥಾನದ ವಿನ್ಯಾಸ ವೈಶಿಷ್ಟ್ಯವನ್ನು ಪರಿಗಣಿಸಿ ಯುನೆಸ್ಕೊ ಈ ಮನ್ನಣೆ ನೀಡಿದೆ. ಕಾಕತೀಯ ವಂಶದ ಅದ್ಭುತ ನಿರ್ಮಾಣದ ಈ ದೇವಸ್ಥಾನವನ್ನು ವೀಕ್ಷಿಸಿ ಅದರ ಅದ್ಧೂರಿತನವನ್ನು ಸ್ವತಃ ವೀಕ್ಷಿಸಿ ಅನುಭವಿಸಿದ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss