ಕಲಬುರಗಿ: ವಿದ್ಯಾರ್ಥಿಯ ಕೈಗೆ ETM ಕೊಟ್ಟು ಟಿಕೆಟ್‌ ಕೊಡಿಸಿದ ಕಂಡಕ್ಟರ್‌ ಅಮಾನತು

ಹೊಸದಿಗಂತ ವರದಿ ಕಲಬುರಗಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಿದ್ಯಾರ್ಥಿಯಿಂದ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಕಂಡಕ್ಟರ್ ಸಿದ್ದಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪದ ಆರೋಪದಡಿ ಕಲಬುರಗಿ ವಿಭಾಗ–1ರ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಅಮಾನತು ಆದೇಶ ಹೊರಡಿಸಿದ್ದಾರೆ. ಆಗಸ್ಟ್ 18ರಂದು ಕಲಬುರಗಿ–ಕಾಳಗಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡಕ್ಟರ್ ಸಿದ್ದಪ್ಪ ಅವರು ವಿದ್ಯಾರ್ಥಿಯೊಬ್ಬನಿಗೆ ಇಟಿಎಂ (ETM) ಯಂತ್ರ ನೀಡಿ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿಸಿದ್ದರು. ವಿದ್ಯಾರ್ಥಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿರುವ … Continue reading ಕಲಬುರಗಿ: ವಿದ್ಯಾರ್ಥಿಯ ಕೈಗೆ ETM ಕೊಟ್ಟು ಟಿಕೆಟ್‌ ಕೊಡಿಸಿದ ಕಂಡಕ್ಟರ್‌ ಅಮಾನತು