ಕಲಬುರಗಿ ಜಿಲ್ಲಾಧಿಕಾರಿಗೆ ಬಂತು ಸಭಾಪತಿಗಳಿಂದ ಪ್ರಶಂಸೆ ಪತ್ರ!

ಹೊಸದಿಗಂತ ವರದಿ,ಕಲಬುರಗಿ:

ಉತ್ತರ ಕರ್ನಾಟಕದ ಐದು ಜಿಲ್ಲೆಗಳ 52,072 ತಾಂಡಾ, ಅಲೆಮಾರಿ, ಜನರಿಗೆ ಏಕಕಾಲಕ್ಕೆ ಹಕ್ಕು ಪತ್ರ ನೀಡುವ ಮೂಲಕ ಅವರುಗಳಿಗೆ ನೆಮ್ಮದಿ ಬದುಕು ಕಲ್ಪಿಸುವ ಮಹೋನ್ನತ ಕೆಲಸವನ್ನು ನಿವ೯ಹಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಗಿನ್ನಿಸ್ ಪುಸ್ತಕದ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿರುವುದು ನನಗೆ ಅತೀವ ಸಂತೋಷವಾಗಿದೆ ಎಂದು ಕಲಬುರಗಿ ಜಿಲ್ಲಾಡಳಿತಕ್ಕೆ ಕನಾ೯ಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶಂಸನೀಯ ಪತ್ರ ಬರೆದು ಅಭಿನಂಧಿಸಿದ್ದಾರೆ.

ಸದರಿ ಮಹತ್ವದ ಕೆಲಸ ನಿವ೯ಸುವಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳಾದ ಯಶವಂತ ಗುರುಕರ್ ಹಾಗೂ ಇಡೀ ಜಿಲ್ಲಾಡಳಿತ ಅತ್ಯಂತ ಪ್ರಮುಖ ಪಾತ ವಹಿಸಿರುವುದು ಅತ್ಯಂತ ಶ್ಲಾಘನೀಯ ಎಂದಿದ್ದಾರೆ.

ತಾಂಡಾಗಳು ಇನ್ನುಮುಂದೆ ಕಂದಾಯ ಗ್ರಾಮಗಳಾಗಲಿವೆ ಎಂಬ ವಿಷಯ ತಿಳಿದು ಈ ಬಗ್ಗೆ ಹಷೀ೯ಸುತ್ತಾ,ತಾವುಗಳು ಮತ್ತು ತಮ್ಮ ತಂಡದವರು ಮಾದರಿಯಾಗಿ ಕೆಲಸ ಮಾಡಿದ್ದಿರಾ.ಘನ ಸಕಾ೯ರದ ಮುಂಚೂಣಿ ಕಾಯ೯ಕ್ರಮವನ್ನು ಇಷ್ಟೊಂದು ಸುವ್ಯವಸ್ಥಿತವಾಗಿ ಬಹು ದೊಡ್ಡ ಸಂಖ್ಯೆಯಲ್ಲಿ ಒಂದೇ ದಿನದಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನಡೆದಿರುವ ಅಭೂತಪೂರ್ವ ಕಾಯ೯ಕ್ರಮವು ಇತಿಹಾಸದಲ್ಲಿಯೇ ಅವಿಸ್ಮರಣೀಯ ಕಾಯ೯ವಾಗಿದೆ ಎಂದು ಪತ್ರದ ಮೂಲಕ ಪ್ರಶಂಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!