Wednesday, August 10, 2022

Latest Posts

ಕಲಬುರಗಿ ಜಿಲ್ಲೆಯಲ್ಲಿ ವರುಣನ ಆರ್ಭಟ: ಹಳ್ಳದಲ್ಲಿ ಸಿಲುಕಿ ಪರದಾಡಿದ ಕುರಿಗಾಯಿಗಳು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ವರದಿ, ಕಲಬುರಗಿ:

ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ವರುಣ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಜನ‌ಸಾಮಾನ್ಯರು ಪರದಾಡುವ ಸ್ಥೀತಿ ನಿರ್ಮಾಣವಾಗಿದೆ. ಕುರಿ ಮೇಯಿಸಲು ತೆರಳಿದಾಗ ಏಕಾಏಕಿ ಹಳ್ಳ ಬಂದು ಕುರಿಗಾಯಿಗಳು ಜೀವ ಉಳಿಸಿಕೊಳ್ಳಲು ಪರದಾಡಿದಂತ ಘಟನೆ ಚಿಂಚೋಳಿ ತಾಲೂಕಿನ ಧರ್ಮಸಾಗರ ತಾಂಡಾದಲ್ಲಿ ನಡೆದಿದೆ.
ತಾಂಡಾದ ಸುತ್ತಮುತ್ತಲಿನ ಹಳ್ಳ ಕೆರೆಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿವೆ. ಬೆಳಗ್ಗೆ ಕುರಿ ಮೇಯಿಸಲು ಹೋಗುವಾಗ ಇಲ್ಲದ ಹಳ್ಳ ಬರುವಾಗ ತುಂಬಿ ಹರಿಯುತ್ತಿದ್ದ ಪರಿಣಾಮ ಕುರಿಗಳ ಸಮೇತ ಕುರಿಗಾಯಿಗಳು ಸಿಲುಕಿ ಪರದಾಡಿದ್ದಾರೆ.
ಇಬ್ಬರು ಕುರಿಗಾಹಿಗಳು ಹಳ್ಳದಾಟಲಾಗದೆ ನೇರವಿಗಾಗಿ ಪರಿತಪಿಸಿದ್ದಾರೆ. ನಂತರ ತಾಂಡಾದ ಜನರು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಇಬ್ಬರನ್ನು ಹಳ್ಳ ದಾಟಿಸುವಲ್ಲಿ ಸಹಾಯ ಮಾಡಿದ್ದಾರೆ.
ಸ್ಥಳಿಯ ಯುವಕರ ಸಹಾಯದಿಂದ ಮೇಕೆಗಳ ಸಮೇತ ಕುರಿಗಾಯಿ ಯಲ್ಲಪ್ಪ ಹಾಗೂ ಇನ್ನೋರ್ವ ಸುರಕ್ಷಿತವಾಗಿ ತಾಂಡಾಕ್ಕೆ ಮರಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss