Monday, August 8, 2022

Latest Posts

ಕಲಬುರಗಿ| ನೂತನ ಪಾಲಿಕೆ ಸದಸ್ಯರಿಗೆ ಸನ್ಮಾನ ಸಮಾರಂಭ

ಹೊಸ ದಿಗಂತ ವರದಿ, ಕಲಬುರಗಿ:

ನೂತನವಾಗಿ ಆಯ್ಕೆಗೊಂಡ ಪಾಲಿಕೆ ಸದಸ್ಯರು ಮುಂಬರುವ ದಿನಗಳಲ್ಲಿ ತಮ್ಮ ತಮ್ಮ ವಾರ್ಡಗಳಲ್ಲಿ ಅತ್ಯಂತ ಕ್ರೀಯಾಶೀಲರಾಗಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಕ್ರೆಡೆಲ್ ಅಧ್ಯಕ್ಷ,ಬಿಜೆಪಿ ಯುವ ಮುಖಂಡ ಚಂದು ಪಾಟೀಲ ಹೇಳಿದರು.
ಅವರು ನಗರದ ಶ್ರೀ ಕಡಗಂಚಿ ಮಠದಲ್ಲಿ ಬಿಜೆಪಿ ಉತ್ತರ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಪಾಲಿಕೆಯ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ. ಮತದಾರರು ನಿಮ್ಮ ಕೈ ಹಿಡಿದು,ಬಿಜೆಪಿಗೆ ಆರಿಸಿ ತಂದಿದ್ದಾರೆ.ಈ ವಿಷಯವನ್ನು ಅರಿತುಕೊಂಡು, ತಾವು ನಿಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಿದೆ ಎಂದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ವಿರುದ್ದ ದೊಡ್ಡ ಮಟ್ಟದ ಕಬಡ್ಡಿ ಆಡುವ ಮೂಲಕ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಪತಾಕೆ ಹಾರಿಸುವಲ್ಲಿ ತಮ್ಮೆಲ್ಲರ ಸಹಕಾರವೂ ಕೂಡ ಅಷ್ಟೆ ಪ್ರಮುಖವಾಗಿದೆ ಎಂದರು.
ಶಹಾಬಜಾರ ಬಡಾವಣೆ ಬಿಜೆಪಿ ಭದ್ರಕೋಟೆಯಿಂದಂತೆ. ಇಲ್ಲಿ ಕಾಂಗ್ರೆಸ್,ನ ಆಟ ನಡೆಯುವುದಿಲ್ಲ. ಉತ್ತರ ಮತಕ್ಷೇತ್ರದ ಈ ಬಾಗವು ಹಿಂದುತ್ವದ ಅಲೆ ತುಂಬಿರುವ ಭಾಗವಾಗಿದೆ. ನಾನು ಕಳೆದ ಬಾರಿ ಸೋತರು, ನಿಮ್ಮೆಲ್ಲರ ಪ್ರೀತಿ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಇದೇ ರೀತಿ ಮುಂಬರುವ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರವಿರಲೆಂದು ಕೇಳಿಕೊಳ್ಳುವೆ ಎಂದರು.
ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ ಮಾತನಾಡಿ, ಪಕ್ಷ ಹಾಗೂ ಹಿರಿಯರು ತಮ್ಮೆಲ್ಲರಿಗೂ ಜನರ ಸೇವೆ ಮಾಡಲು ನಿಮಗೆ ಒಂದು ಅವಕಾಶವನ್ನು ನೀಡಿದ್ದಾರೆ. ಆ ನಿಟ್ಟಿನಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ನೀವು ಕೆಲಸ ಮಾಡಬೇಕೆಂದರು. ಗೆದ್ದಿರುವ ಹಾಗೂ ಸೋತಿರುವ ವ್ಯಕ್ತಿಗಳ ಸಹಕಾರ ಪಕ್ಷಕ್ಕೆ ಅತ್ಯಂತ ಅಮೂಲ್ಯವಾಗಿದ್ದು, ಮುಂಬರುವ ದಿನಗಳಲ್ಲಿ ನಾವೆಲ್ಲರು ಒಟ್ಟಾಗಿ ಕಮಲ ಅರಳಿಸುವಲ್ಲಿ ಪಕ್ಷದ ಸಂಘಟನೆ ಮಾಡಬೇಕಿದೆ ಎಂದರು.
ಸಂದರ್ಭದಲ್ಲಿ ಷ.ಭ್ರ.ವೀರಭದ್ರ ಶಿವಾಚಾರ್ಯರು ಆಶಿರ್ವಚನ ನೀಡಿದರು. ವೇದಿಕೆಯಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಉತ್ತರ ಮಂಡಲ ಅಧ್ಯಕ್ಷ ಅಶೋಕ ಮಾನಕರ್,ಮಲ್ಲಿಕಾರ್ಜುನ ಓಕಳಿ, ಪ್ರಭಾರಿ ದಿವ್ಯಾ ಹಾಗರಗಿ, ಮಲ್ಲಿಕಾರ್ಜುನ ಖೇಮಜಿ, ಪ್ರಮೋದ ಸಂಕಾಣಿ, ಯೋಗೀಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss