Saturday, August 13, 2022

Latest Posts

ಸಿಎಂ ಆಗಮನಕ್ಕಾಗಿ ಮದುವಣಗಿತ್ತಿಯಂತೆ ಶೃಂಗಾರಗೊಂಡ ಕಲಬುರಗಿ

ಹೊಸದಿಗಂತ ವರದಿ, ಕಲಬುರಗಿ:

ಕಲ್ಯಾಣ ಕನಾ೯ಟಕ ಉತ್ಸವಕ್ಕಾಗಿ ನಾಡಿನ ದೊರೆ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನಕ್ಕಾಗಿ ನಗರವು ಮದುವಣಗಿತ್ತಿಯಂತೆ ಶೃಂಗಾರಗೊಂಡು ಕಂಗೋಳಿಸುತ್ತಿದೆ.
ನಗರದ ಪ್ರಮುಖ ರಸ್ತೆಗಳಾದ ಸದಾ೯ರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ಸಕ೯ಲ್, ಸೂಪರ್ ಮಾಕೆ೯ಟ್ ರಸ್ತೆಗಳು ಕಟೌಟ್ ಹಾಗೂ ಬ್ಯಾನರಗಳಿಂದ ರಾರಾಜಿಸುತ್ತಿವೆ.
ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 7 ಗಂಟೆಗೆ ಆಗಮಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇರವಾಗಿ ವಿಮಾನ ನಿಲ್ದಾಣದಿಂದ ರಸ್ತೆಯ ಮಾಗ೯ವಾಗಿ ಸದಾ೯ರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಆಗಮಿಸಿ, ಪಟೇಲ್’ರ ಪುತ್ತಳಿಗೆ ಮಾಲಾಪ೯ಣೆ ಮಾಡಲಿದ್ದಾರೆ.
ನಂತರ ನಗರದ ಪೋಲಿಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕನಾ೯ಟಕದ ಉತ್ಸವದ ಅಂಗವಾಗಿ ದ್ವಜಾರೋಹಣ ನೆರವೆರಿಸಿ, ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಅಭಿವೃದ್ಧಿ ಕಾಯ೯ಕ್ರಮಗಳಿಗೆ ಲೋಕಾಪ೯ಣೆ ಮಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಕಾಳಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ ಮಾಡಲಿದ್ದು, ರಾಜ್ಯ ಸಕಾ೯ರದ ಹಲವು ಸಚಿವರು,ಶಾಸಕರು ಈ ಐತಿಹಾಸಿಕ ಕಾಯ೯ಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss