Thursday, July 7, 2022

Latest Posts

ಗಾಂಧೀಜಿ ಬಗ್ಗೆ ಅವಹೇಳನಾಕಾರಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾತ್ಮ ಗಾಂಧೀಜಿ ವಿರುದ್ಧ ಅವಹೇಳನಾಕಾರಿ ಭಾಷಣ ಮಾಡಿದ್ದ ಕಾಳಿಚರಣ್ ಮಹಾರಾಜ್‌ರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಗಾಂಧೀಜಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಾಂಧೀಜಿ ಕೊಂದ ನಾಥುರಾಮ್ ಗೋಡ್ಸೆಯನ್ನು ಕಾಳಿಚರಣ್ ಶ್ಲಾಘಿಸಿದ್ದರು.

ಅಷ್ಟೇ ಅಲ್ಲದೆ ಧರ್ಮವನ್ನು ರಕ್ಷಿಸಲು ಹಿಂದೂ ನಾಯಕನೇ ದೇಶ ಆಳಬೇಕು ಎಂದೂ ಹೇಳಿದ್ದರು.
ಮಧ್ಯಪ್ರದೇಶದ ಬಾಗೇಶ್ವರ ಧಾಮದ ಬಳಿಯ ವಸತಿ ಗೃಹದಲ್ಲಿ ತಂಗಿದ್ದ ಕಾಳಿಚರಣ್‌ರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.

ರಾಯ್‌ಪುರದಲ್ಲಿ ಆಯೋಜಿಸಿದ್ದ ಧರ್ಮ ಸಂಸದ್‌ನಲ್ಲಿ ಕಾಳಿಚರಣ್ ಭಾಷಣ ಮಾಡಿದ್ದು, ಗಾಂಧೀಜಿ ಬಗ್ಗೆ ಅವಹೇಳನಾಕಾರಿ ಮಾತುಗಳನ್ನು ಆಡಿದ್ದಾರೆ. ನಮ್ಮ ಧರ್ಮ ಉಳಿಯಲು ಕಟ್ಟಾ ಹಿಂದೂವನ್ನೇ ನಾಯಕನನ್ನಾಗಿ ಆಯ್ಕೆ ಮಾಡಿ ಎನ್ನುವ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ರಾಜಕೀಯದ ಮೂಲಕ ರಾಷ್ಟ್ರ ವಶಪಡಿಸಿಕೊಳ್ಳುವುದು ಇಸ್ಲಾಂ ಧರ್ಮದ ಗುರಿ. ಮೊದಲು ಇರಾಕ್ ಇರಾನ್ ವಶಪಡಿಸಿಕೊಂಡರು, ಆಮೇಲೆ ದೇಶವನ್ನೇ ವಿಭಜಿಸಿದರು. ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನನ್ನ ನಮಸ್ಕಾರ ಎಂದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss