ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಎಸ್ಎಂಎ ಟೈಪ್ 1 ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಆರು ತಿಂಗಳ ಹೆಣ್ಣು ಮಗು ತೀರಾ ಕಾಮತ್ಗೆ 16 ಕೋಟಿ ಬೆಲೆಯ ಚುಚ್ಚುಮದ್ದು ನೀಡಲಾಯಿತು.
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ಝೊಲ್ಜೆನ್ಸ್ಮ ಚುಚ್ಚುಮದ್ದು ಅವಶ್ಯಕವಾಗಿತ್ತು. ಆದರೆ ಈ ಇಂಜೆಕ್ಷನ್ ಭಾರತದಲ್ಲಿ ಲಭಿಸದ ಕಾರಣ ಯುಎಸ್ನಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಆದರೆ ಈ ಅಪರೂಪದ ರೋಗವು ಚಿಕಿತ್ಸೆ ಹೊಂದಿದ್ದರೂ, ಅದರ ವೆಚ್ಚವು ಮಗುವಿನ ಪೋಷಕರ ಆರ್ಥಿಕ ಸಾಮರ್ಥ್ಯ ಮೀರಿತ್ತು. ಕಾರಣ ಅದರ ಬೆಲೆ 16 ಕೋಟಿ ರೂಪಾಯಿಗಳಷ್ಟಿತ್ತು.
ಆದರೆ, ಮಗುವಿನ ತಂದೆ ತಮ್ಮ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿದರು. ಇದೆ ವೇಳೆ ಪ್ರಧಾನಿ ಮೋದಿ ಮೂಗಿನ ತಂದೆ ತಾಯಿಯ ಕಷ್ಟ ಅರಿತು ಚುಚ್ಚುಮದ್ದಿನ ಮೇಲಿನ 6 ಕೋಟಿ ಯಷ್ಟು ಆಮದು ಸುಂಕ ಮತ್ತು ಜಿಎಸ್ಟಿಯನ್ನು ಮನ್ನಾ ಮಾಡಿದರು. ಈ ಮೂಲಕ ಮಗುವಿಗೆ ಚುಚ್ಚುಮದ್ದು ನೀಡಲಾಯಿತು.
ಡೋಸೇಜ್ ನೀಡಿದ ನಂತರ ಮಗು ಈಗ ವೈದ್ಯಕೀಯ ವೀಕ್ಷಣೆಯಲ್ಲಿದೆ. ಒಂದು ಅಥವಾ ಎರಡು ದಿನಗಳಲ್ಲಿ ಆಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಈ ವೇಳೆ ಮಗುವಿನ ಪೋಷಕರು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.