2ನೇ ಮಗುವಿನ ತಂದೆಯಾದ ಕೇನ್​ ವಿಲಿಯಮ್ಸನ್: ಸಹ ಆಟಗಾರರಿಂದ ಅಭಿನಂದನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸನ್​​ಸೈಸರ್ಸ್​ ಹೈದರಾಬಾದ್​ ತಂಡದ ಕ್ಯಾಪ್ಟನ್​​ ಕೇನ್​ ವಿಲಿಯಮ್ಸನ್ ಪತ್ನಿ ಸಾರಾ ರಹೀಮ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಕುರಿತು ​ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಕೇನ್, ಪತ್ನಿ ಸಾರಾ ರಹೀಮ್​ ಹಾಗೂ ಮೊದಲ ಮಗಳೊಂದಿಗೆ ಈಗಷ್ಟೇ ಹುಟ್ಟಿರುವ ಮಗುವಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. “Welcome to the whanau little man!” ಎಂದು ಕೇನ್​ ಬರೆದುಕೊಂಡಿದ್ದು, ಮುದ್ದಾದ ಗಂಡು ಮಗುವನ್ನ ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಕೇನ್​ ವಿಲಿಯಮ್ಸನ್​ ಮೇ. 22ರಂದು ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಕೊನೆಯ ಲೀಗ್ ಪಂದ್ಯ ಆಡಿರಲಿಲ್ಲ. ಅದಕ್ಕೂ ಮುಂಚಿತವಾಗಿ ಅವರು ನ್ಯೂಜಿಲ್ಯಾಂಡ್​ಗೆ ಪ್ರಯಾಣ ಬೆಳೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಫ್ರಾಂಚೈಸಿ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿತ್ತು. ಹೀಗಾಗಿ, ಕೊನೆಯ ಪಂದ್ಯವನ್ನ ವೇಗಿ ಭುವನೇಶ್ವರ್ ಕುಮಾರ್ ಮುನ್ನಡೆಸಿದ್ದರು.

ಕೇನ್​​ ಗಂಡು ಮಗುವಿನ ತಂದೆಯಾಗುತ್ತಿದ್ದಂತೆ ಡೇವಿಡ್​ ವಾರ್ನರ್​, ರಶೀದ್ ಖಾನ್​, ಜೇಸನ್ ಹೋಲ್ಡರ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ‘ಅಭಿನಂದನೆಗಳು ಕೇನ್ ಮಾಮಾ’ ಎಂದು ರಶೀದ್ ಖಾನ್​ ಟ್ವೀಟ್ ಮಾಡಿದ್ದಾರೆ. ಇನ್ನೂ ಸನ್​ರೈಸರ್ಸ್ ಹೈದರಾಬಾದ್​ ಫ್ರಾಂಚೈಸಿ ಕೂಡ ಟ್ವೀಟ್ ಮಾಡಿದ್ದು, ನಮ್ಮ ಕುಟುಂಬದಿಂದ ಶುಭಾಶಯಗಳು ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!