Saturday, August 13, 2022

Latest Posts

ಕಂಗನಾ ‘ಕೂ’ ಖಾತೆಗೆ ಒಂದು ಮಿಲಿಯನ್ ಫಾಲೋವರ್ಸ್: ಸಾಮಾಜಿಕ ಜಾಲತಾಣದಲ್ಲೀಗ ‘ತಲೈವಿ’ ಹವಾ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಟಿ ಕಂಗನಾ ರಣಾವತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸದಾ ಆಯಕ್ಟೀವ್​ ಆಗಿರುತ್ತಾರೆ. ಹಲವು ವಿಚಾರಗಳ ಬಗ್ಗೆ ಅವರು ಪ್ರತಿಕ್ರಿಯಿಸುತ್ತಾರೆ. ಆ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರಬೇಕು ಎಂಬುದು ಅವರ ಉದ್ದೇಶ. ಆ ಕಾರಣದಿಂದ ಅವರನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ದೊಡ್ಡದಿದೆ.
ಫೇಸ್​ಬುಕ್​, ಇನ್ಸ್​ಸ್ಟಾಗ್ರಾಮ್​ ಮಾತ್ರವಲ್ಲದೆ, ಕೂ ಆಯಪ್​ನಲ್ಲೂ ಕಂಗನಾ ಖಾತೆ ಹೊಂದಿದ್ದು, ಅದರಲ್ಲಿಯೂ ಅವರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದು, ಕಂಗನಾ ಒಂದು ಮೈಲಿಗಲ್ಲು ತಲುಪಿದ್ದಾರೆ. ಕಂಗನಾ ಕೂ ಖಾತೆಗೆ ಒಂದು ಮಿಲಿಯನ್​ (10 ಲಕ್ಷ) ಫಾಲೋವರ್ಸ್​ ಆಗಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಕಂಗನಾ ಅವರ ಕೂ ಖಾತೆಯ ಫಾಲೋವರ್ಸ್​ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇತ್ತೀಚೆಗೆ ಬಿಡುಗಡೆಯಾದ ‘ತಲೈವಿ’ ಸಿನಿಮಾ ಕುರಿತು ಅವರು ಹಲವು ಪೋಸ್ಟ್​ಗಳನ್ನು ಮಾಡಿದ್ದರು. ಅವರ ಚಿತ್ರದ ಪ್ರಚಾರಕ್ಕೆ ಇದು ಭರ್ಜರಿ ವೇದಿಕೆ ಆಯಿತು. ಅಲ್ಲದೇ ಅನೇಕ ವಿಚಾರಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಹಾಗಾಗಿ ಅವರ ಖಾತೆಯ ಬಗ್ಗೆ ನೆಟ್ಟಿಗರು ಹೆಚ್ಚು ಕುತೂಹಲ ತೋರಿಸುತ್ತಿದ್ದಾರೆ.
ಇತರೆ ಸಾಮಾಜಿಕ ಜಾಲತಾಣಗಳಿಗೆ ಹೋಲಿಸಿದರೆ ಕೂ ಆರಂಭವಾಗಿರುವುದು ಇತ್ತೀಚೆಗೆ. 2020ರ ಮಾರ್ಚ್​​ನಲ್ಲಿ ಕಾರ್ಯರಂಭ ಮಾಡಿದ ಈ ಆಯಪ್​ನತ್ತ ಹಲವು ಸೆಲೆಬ್ರಿಟಿಗಳು ಆಸಕ್ತಿ ತೋರಿಸುತ್ತಿದ್ದಾರೆ. ಅವರ ಪೈಕಿ ಒಂದು ಮಿಲಿಯನ್ ಫೋಲೋವರ್ಸ್​ ಪಡೆದ ಮೊದಲ ಮಹಿಳಾ ಸೆಲೆಬ್ರಿಟಿ ಎಂಬ ಖ್ಯಾತಿ ಸಿಕ್ಕಿರುವುದು ಕಂಗನಾ ರಣಾವತ್ ಅವರಿಗೆ ಎಂಬುದು ವಿಶೇಷ.
ಕೆಲವೇ ತಿಂಗಳ ಹಿಂದೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ ಕಂಗನಾ ಅವರ ಟ್ವಿಟರ್​ ಖಾತೆಯನ್ನು ಶಾಶ್ವತವಾಗಿ ಬ್ಯಾನ್​ ಮಾಡಲಾಯಿತು. ಹಾಗಂತ ಅವರು ಕುಗ್ಗಲಿಲ್ಲ. ಟ್ವಿಟರ್​ ಬದಲಿಗೆ ಬೇರೆ ಸೋಶಿಯಲ್​ ಮೀಡಿಯಾಗಳನ್ನು ಹೆಚ್ಚಾಗಿ ಬಳಸಲು ಆರಂಭಿಸಿದರು. ವೇದಿಕೆ ಯಾವುದಾದರೇನು, ಅಲ್ಲಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸುವ ತಾಕತ್ತು ತಮ್ಮಲ್ಲಿದೆ ಎಂಬುದನ್ನು ಕಂಗನಾ ಸಾಬೀತು ಮಾಡುತ್ತಲೇ ಇದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss