ಹೊಸದಿಗಂತ ಆನ್ಲೈನ್ ಡೆಸ್ಕ್:
ಬಾಲಿವುಡ್ ನಟ ಸೋನು ಸೂದ್ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಿ, ಜನರ ಕಣ್ಣಿನಲ್ಲಿ ದೊಡ್ಡ ಸ್ಥಾನ ಅಲಂಕರಿಸಿದ್ದಾರೆ.
ಈ ನಡುವೆ ಸೋನು ಸೂದ್ ಇದನ್ನೆಲ್ಲಾ ಪ್ರಚಾರಕ್ಕಾಗಿ ಮಾಡುತ್ತಾರೆ, ದುಪ್ಪಟ್ಟು ಹಣ ಹೊಡೆಯುತ್ತಾರೆ ಎಂಬ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಟ್ವೀಟ್ನ್ನು ಕಂಗನಾ ಲೈಕ್ ಮಾಡಿದ್ದಾರೆ.
ಇದ್ದಿದ್ದನ್ನು ಇದ್ದ ಹಾಗೆ, ಯಾರಿಗೂ ಹೆದರದೆ ಮಾತನಾಡುವ ಕಂಗನಾ ಇದೀಗ ಸೋನು ಸೂದ್ ಬಗ್ಗೆ ನೆಗೆಟಿವ್ ಟ್ವೀಟ್ ಒಂದಕ್ಕೆ ಲೈಕ್ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೈಥುಲ್ ಎನ್ನುವ ಟ್ವಿಟರ್ ಖಾತೆಯಿಂದ ಈ ಪೋಸ್ಟ್ ಮಾಡಲಾಗಿದೆ.