ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡ್ರಾಮಾ ಕ್ವೀನ್ ಕರಣ್ ಜೋಹರ್, ಸುಶಾಂತ್ ಹಿಂದೆ ಬಿದ್ದಂತೆ ಕಾರ್ತಿಕ್ ಹಿಂದೆಯೂ ಬೀಳಬೇಡಿ..!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅನ್‌ಪ್ರೊಫೇಶನಲ್ ಬಿಹೇವಿಯರ್ ಎಂದು ಕರಣ್ ಜೋಹರ್ ಕಾರ್ತಿಕ್ ಆರ್ಯನ್‌ರನ್ನು ದೋಸ್ತಾನಾ-2 ಸಿನಿಮಾದಿಂದ ಹೊರಕಳಿಸಿದ್ದು, ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಕಂಗನಾ ಟ್ವೀಟ್ ಮಾಡಿದ್ದು, ಕಾರ್ತಿಕ್ ನೀವು ಇಷ್ಟು ದೂರ ಬಂದಿದ್ದೀರಿ. ನಿಮ್ಮ ಹಿಂದೆ ಯಾವ ಬಿಗ್‌ಬಾಸ್ ಇಲ್ಲ. ಮುಂದೆಯೂ ಯಾರ ಅವಶ್ಯಕತೆ ಇಲ್ಲದೆ ಮುನ್ನುಗ್ಗುತ್ತೀರಿ. ಕರಣ್ ಜೋಹರ್ ಹಾಗೂ ಅವರ ನೆಪೋಟಿಸಂ ಗ್ಯಾಂಗ್ ಬಳಿ ಒಂದೇ ಮನವಿ ಮಾಡುತ್ತೇನೆ. ದಯವಿಟ್ಟು ಕಾರ್ತಿಕ್‌ನನ್ನು ಅವನ ಪಾಡಿಗೆ ಬಿಟ್ಟುಬಿಡಿ. ಸುಶಾಂತ್ ಸಿಂಗ್ ರಜಪೂತ್ ಹಿಂದೆ ಬಿದ್ದ ಹಾಗೆ ಇವರ ಹಿಂದೆಯೂ ಬೀಳಬೇಡಿ ಹದ್ದುಗಳೇ ಎಂದಿದ್ದಾರೆ.
ಕಾರ್ತಿಕ್ ಈ ಚಿಲ್ಲರೆ ವ್ಯಕ್ತಿಗಳಿಗೆ ಭಯಬೀಳಬೇಡಿ. ಬಾಯಿಗೆ ಬಂದ ಹಾಗೆ ನಿಮ್ಮ ಬಗ್ಗೆ ಮಾತನಾಡಿ ಇದೀಗ ಮೌನವಾಗಿದ್ದಾರೆ. ಡಿಗ್ನಿಫೈಡ್ ಸೈಲೆನ್ಸ್ ಮೇಂಟೇನ್ ಮಾಡುತ್ತೇವೆ ಎನ್ನುತ್ತಾರೆ. ಇವರೆಲ್ಲಾ ಯಾಕೆ ಹೀಗೆ? ನಂತರ ಡ್ರಗ್ಸ್ ಹಾಗೂ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಸುಶಾಂತ್‌ನನ್ನು ದೂರಿದರು. ಈಗಲೂ ಹಾಗೆ ಮಾಡುತ್ತಾರೆ ಎಂದಿದ್ದಾರೆ.
ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮನ್ನು ಒಬ್ಬರೇ ಬೆಳೆಸಿಲ್ಲ ಹಾಗೆಯೇ ಒಬ್ಬರೇ ನಿಮ್ಮನ್ನು ಮುಗಿಸಲೂ ಸಾಧ್ಯ ಇಲ್ಲ. ಈ ಡ್ರಾಮಾ ಕ್ವೀನ್ ಕರಣ್ ಜೋಹರ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮನ್ನು ನಾವು ನಂಬುತ್ತೇವೆ, ಆರಾಮಾಗಿರಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss