Tuesday, July 5, 2022

Latest Posts

ಕೊರೋನಾ ವೈರಸ್ ನನ್ನ ದೇಹದೊಳಗೆ ಪಾರ್ಟಿ ಮಾಡ್ತಿದೆ.. ಇದನ್ನು ಒದ್ದು ಓಡಿಸುತ್ತೇನೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್ ನಟಿ ಕಂಗನಾ ರಣೌತ್‌ಗೆ ಕೊರೋನಾ ಸೋಂಕು ತಗುಲಿದೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಗನಾ ‘ನನಗೆ ಸ್ವಲ್ಪ ದಿನದಿಂದ ಸುಸ್ತು, ಕಣ್ಣುರಿ ಆಗುತ್ತಿತ್ತು. ಹಿಮಾಚಲಕ್ಕೆ ಹೋಗಿಬಿಡೋಣ ಎಂದುಕೊಂಡೆ. ಅದಕ್ಕಾಗಿಯೇ ಟೆಸ್ಟ್ ಮಾಡಿಸಿದೆ. ಇಂದು ರಿಸಲ್ಟ್ ಬಂದಿದೆ. ನನಗೆ ಕೋವಿಡ್ ಸೋಂಕು ತಗುಲಿದೆ.


ಕ್ವಾರೆಂಟೀನ್ ಆಗಿದ್ದೇನೆ. ಈ ವೈರಸ್ ನನ್ನ ದೇಹದೊಳಗೆ ಹೊಕ್ಕಿ ಪಾರ್ಟಿ ಮಾಡುತ್ತಿರುವ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಈಗ ಗೊತ್ತಿದೆ. ಇದನ್ನು ನಾನು ಓಡಿಸುತ್ತೇನೆ. ಕೊರೋನಾ ಕೈಗೆ ಯಾರೂ ಪವರ್ ಕೊಡಬೇಡಿ. ನೀವು ಪವರ್‌ಫುಲ್ ಆಗಿ. ಹೆದರಿದರೆ ಹೆದರಿಸೋರೆ ಜಾಸ್ತಿ. ಇದೊಂದು ಸಣ್ಣ ಫ್ಲೂ ಅಷ್ಟೇ’ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss