Monday, August 8, 2022

Latest Posts

ಆಲಿಯಾ ಅಭಿನಯಿಸಿದ ಜಾಹೀರಾತಿನ ವಿರುದ್ಧ ಮಾತನಾಡಿದ ಕಂಗನಾ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ಜಾಹೀರಾತೊಂದರಲ್ಲಿ ನಟಿಸಿದ್ದು, ಜಾಹೀರಾತಿನಲ್ಲಿ ಕನ್ಯಾದಾನದ ಬಗ್ಗೆ ಉಲ್ಲೇಖವಾಗಿದೆ.
‘ನನ್ನನ್ನು ದಾನ ಮಾಡಲು ನಾನೇನು ವಸ್ತುವಾ?’ ಎಂಬ ಸಾಲು ಜಾಹೀರಾತಿನಲ್ಲಿದ್ದು, ಕಂಗನಾ ಇದರ ವಿರುದ್ಧ ಮಾತನಾಡಿದ್ದಾರೆ.
ನಿಮ್ಮ ಜಾಹೀರಾತುಗಳಿಗಾಗಿ ನಮ್ಮ ಮೌಲ್ಯ ಹಾಳು ಮಾಡಬೇಡಿ ಎಂದು ಕಂಗನಾ ಹೇಳಿದ್ದಾರೆ.
ಎಲ್ಲಾ ಬ್ರಾಂಡ್‌ಗಳಿಗೂ ಮಾರ್ಕೆಟಿಂಗ್‌ಗಾಗಿ ಹೊಸ ಐಡಿಯಾಗಳು ಬೇಕು. ಹಾಗಂತ ನಮ್ಮ ಮೌಲ್ಯಗಳಿಗೆ ಹೊಡೆತ ಬಿದ್ದರೆ ಸುಮ್ಮನಿರಲು ಸಾಧ್ಯ ಇಲ್ಲ ಎಂದು ಕಂಗನಾ ಹೇಳಿದ್ದಾರೆ.
ಗ್ರಾಹಕರನ್ನು ಧರ್ಮದ ಹೆಸರಿನಲ್ಲಿ ಒಡೆಯಬೇಡಿ, ಹಿಂದೂ ಆಚರಣೆ ಅಣಕಿಸಬೇಡಿ ಎಂದು ಕಂಗನಾ ಹೇಳಿದ್ದಾರೆ. ಕೆಲವರು ಈ ವಾದವನ್ನು ಒಪ್ಪಿದ್ದು, ಇನ್ನೂ ಹಲವರು ಕಂಗನಾ ನ್ಯೂಸೆನ್ಸ್ ಕ್ರಿಯೇಟ್ ಮಾಡುತ್ತಾರೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss