ಮಥುರಾ ಕ್ಷೇತ್ರದಿಂದ ಕಂಗನಾ ರಾಜಕೀಯ ಶುರು?: ಹಾಲಿ ಸಂಸದೆ ಹೇಮಾ ಮಾಲಿನಿ ಏನು ಹೇಳಿದ್ರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್​ ನಟಿ ಕಂಗನಾ ರಣಾವತ್ ಅವರು ಮಥುರಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳ ಕುರಿತು ಹಾಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಶನಿವಾರ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಬಗ್ಗೆ ಉತ್ತರಿಸಿದ ಅವರು, ಈ ಕ್ಷೇತ್ರದಲ್ಲಿ ಚಲನಚಿತ್ರ ತಾರೆಯರು ಮಾತ್ರ ಪ್ರತಿನಿಧಿಸಬೇಕೆಂದಿದೆಯೇ? , ಹಾಗಾದರೆ ನಿಮಗೆ ಸ್ಥಳೀಯ ನಾಯಕರು ಯಾರೂ ಸ್ಪರ್ಧಿಸುವುದು ಬೇಡವೇ? ನೀವು ಹೇಳಿದಂತೆ ಅವರು ಸ್ಪರ್ಧಿಸುವುದಾದರೆ ತುಂಬಾ ಒಳ್ಳೆಯದು. ಮಥುರಾದಲ್ಲಿ ಸಿನಿ ತಾರೆಯರು ಮಾತ್ರ ಬೇಕು ಅಂದಾದರೆ ನಾಳೆ ರಾಖಿ ಸಾವಂತ್ ಕೂಡ ಬರಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಾನು ಏನು ಹೇಳಬೇಕು? ಅದರ ಬಗ್ಗೆ ನನ್ನ ಅಭಿಪ್ರಾಯವೇನು? ಅದೆಲ್ಲವನ್ನು ಮೇಲಿರುವ ಶ್ರೀಕೃಷ್ಣ ಪರಮಾತ್ಮ ಮುಂದಿನ ದಿನಗಳಲ್ಲಿ ನೋಡಿಕೊಳ್ಳುತ್ತಾನೆ. ಅವನ ಇಚ್ಚೆಯೇ ನನ್ನ ಇಚ್ಚೆ ಎಂದರು.

ಇತ್ತೀಚಿಗೆ ಕಂಗನಾ, ಅಭಿಮಾನಿಗಳು ಬಯಸುವುದಾದರೆ ರಾಜಕೀಯಕ್ಕೆ ಸೇರಲು ನಾನು ಖಂಡಿತವಾಗಿ ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಇದೇ ಹೇಳಿಗೆ ಇದೀಗ ಜಾಲತಾಣದಲ್ಲಿ ಹೊಸ ಆಯಾಮ ಪಡೆದುಕೊಂಡಿದೆ.

ಇನ್ನು 73 ವರ್ಷದ ಹೇಮಾ ಮಾಲಿನಿ ಅವರು 2014 ಮತ್ತು 2019 ರಲ್ಲಿ ಎರಡು ಬಾರಿ ಮಥುರಾದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಮುಂಬರುವ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಇಂಗಿತ ಇಟ್ಟುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!