spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕನ್ನಡ ಬಿಗ್​ ಬಾಸ್​: ಫಿನಾಲೆಗೂ ಮೊದಲೇ ಲಕ್ಕಿ ಬಾಯ್​ ಶಮಂತ್​ ಬ್ರೋ ಗೌಡ ಎಲಿಮಿನೇಟ್​

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಈ ವಾರ ಮನೆಯಿಂದ ಶಮಂತ್​ ಬ್ರೋ ಗೌಡ ಅವರು ಎಲಿಮಿನೇಟ್​ ಆಗಿದ್ದಾರೆ.
ಲಕ್ಕಿ ಬಾಯ್​ ಎನಿಸಿಕೊಂಡಿದ್ದ ಅವರು, ಫಿನಾಲ್​ ವೀಕ್​ಗೆ ಲಗ್ಗೆ ಇಡುವಲ್ಲಿ ಎಡವಿದ್ದಾರೆ. ಈ ಮೂಲಕ ಮನೆಯ ಸ್ಪರ್ಧಿಗಳ ಸಂಖ್ಯೆ ಆರಕ್ಕೆ ಇಳಿಕೆ ಆಗಿದೆ.
ಈ ವಾರ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದರು. ಸಾಮಾನ್ಯವಾಗಿ ವೀಕೆಂಡ್​ನಲ್ಲಿ ಎಲಿಮಿನೇಷನ್​ ನಡೆಯುತ್ತದೆ. ಆದರೆ, ಮಂಗಳವಾರ (ಜುಲೈ 27) ಚಕ್ರವರ್ತಿ ಚಂದ್ರಚೂಡ್​ ಎಲಿಮಿನೇಟ್​ ಆದರು. ಅಚ್ಚರಿ ಎಂಬಂತೆ, ಶನಿವಾರ (ಜುಲೈ 31) ಕೂಡ ಒಂದು ಎಲಿಮಿನೇಷನ್​ ನಡೆಯಿತು. ಈ ವೇಳೆ ಶುಭಾ ಪೂಂಜಾ ಮನೆಯಿಂದ ಹೊರ ನಡೆದರು.
ಇನ್ನು, ಭಾನುವಾರ ಕೂಡ ಒಂದು ಎಲಿಮಿನೇಷನ್​ ನಡೆಯಲಿದೆ ಎಂದು ಸುದೀಪ್​ ಹೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್​ ತಲೆಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿತ್ತು. ಈ ಪೈಕಿ ಶಮಂತ್​ ಅವರು ಇಂದು ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ.
ಇನ್ನು, ಮಂಗಳವಾರ (ಆಗಸ್ಟ್​ 3) ಮತ್ತೊಂದು ಎಲಿಮಿನೇಷನ್​ ನಡೆಯಲಿದೆ. ಅಲ್ಲಿಗೆ, ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 5ಕ್ಕೆ ಇಳಿಕೆ ಆಗಲಿದೆ. ಫಿನಾಲೆಯಲ್ಲಿ ಇರುವವರು ಯಾರು ಅನ್ನೋದು ಸದ್ಯದ ಕುತೂಹಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss