ಕನ್ನಡ ‘ಬಿಗ್ ಬಾಸ್ ಸೀಸನ್ 9’ರ ಫಿನಾಲೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಕೊನೆಯ ಹಂತ ತಲುಪುತ್ತಿದ್ದು, ಇದೀಗ ಫಿನಾಲೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಿಸೆಂಬರ್ 31 ಹಾಗೂ ಜನವರಿ 1ರಂದು ಫಿನಾಲೆ ನಡೆಯಲಿದೆ.

ಈ ಕುರಿತು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಮಾಹಿತಿ ನೀಡಲಾಗಿದೆ. ಡಿಸೆಂಬರ್ 22ರ ಎಪಿಸೋಡ್​ನಲ್ಲಿ ಫಿನಾಲೆಗೆ 10 ದಿನ ಬಾಕಿ ಎಂಬ ಸೂಚನೆ ನೀಡಲಾಗಿದೆ.

ಈ ಬಾರಿ9 ನವೀನರು ಹಾಗೂ 9 ಹಳೆಯ ಸ್ಪರ್ಧಿಗಳ ಮೂಲಕ ಬಿಗ್ ಬಾಸ್ ಆರಂಭಗೊಂಡಿತ್ತು. ಸದ್ಯ ಬಿಗ್ ಬಾಸ್ ಮನೆಯಲ್ಲಿ 8 ಸ್ಪರ್ಧಿಗಳಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ.

ಫಿನಾಲೆಯಲ್ಲಿ ಇರೋದು ಐವರು ಮಾತ್ರ. ಆದರೆ, ಈಗ ಇರೋದು 10 ಮಂದಿ. ಹೀಗಾಗಿ, ಎಂಟು ಮಂದಿಯಲ್ಲಿ ಇಬ್ಬರು ಈ ವಾರ ಹೊರಹೋಗಬಹುದು. ಮತ್ತೋರ್ವ ಸ್ಪರ್ಧಿ ಮುಂದಿನವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಈ ಮೂಲಕ ಫಿನಾಲೆಗೆ ಐವರು ಸ್ಪರ್ಧಿಗಳು ತಲುಪಲಿದ್ದಾರೆ.

ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್​ ಗುರೂಜಿ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಮನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!