ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ಬಾಸ್ ಸೀಸನ್ 11 ಆರಂಭಕ್ಕೆ ಕೆಲವೇ ದಿನಗಳಲ್ಲಿ ಬಾಕಿ ಉಳಿದಿದ್ದು, ಮತ್ತೊಂದು ಪ್ರೋಮೊ ಬಿಡುಗಡೆಯಾಗಿ ಕುತೂಹಲ ಕೆರಳಿಸಿವೆ.
ಈ ಹೊಸ ಸೀಸನ್ ಅನ್ನೂ ಸಹ ಸುದೀಪ್ ಅವರೇ ನಿರೂಪಣೆ ಮಾಡಲಾಗುತ್ತಿದ್ದು, ಅವರನ್ನು ಒಳಗೊಂಡಿರುವ ಪ್ರೊಮೊ ಬಿಡುಗಡೆ ಆಗಿದೆ. ಇಂದು (ಸೆಪ್ಟೆಂಬರ್ 21) ಬಿಡುಗಡೆ ಆಗಿರುವ ಹೊಸ ಪ್ರೋಮೋನಲ್ಲಿ ಸುದೀಪ್ ಸ್ವರ್ಗ ಮತ್ತು ನರಕದ ಕತೆ ಹೇಳಿದ್ದಾರೆ. ಆ ಮೂಲಕ ಬಿಗ್ಬಾಸ್ ಮನೆ ಈ ಬಾರಿ ಹೇಗಿರಲಿದೆ ಎಂಬ ಸಣ್ಣ ಸುಳಿವೊಂದನ್ನು ನೀಡಿದ್ದಾರೆ.
https://x.com/ColorsKannada/status/1837499285346439460
ಪ್ರೋಮೋದ ಆರಂಭದಲ್ಲಿಯೇ ಕೆಲವು ಯುವಕ-ಯುವತಿಯರು ಸ್ವರ್ಗದಲ್ಲಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಖುಷಿಯಿಂದ ಆಹಾರ ಸೇವಿಸುತ್ತಿದ್ದಾರೆ. ಅದೇ ವಿಡಿಯೋ ಮುಂದುವರೆದರೆ ನರಕದಂತೆ ಕಾಣುವ ಭೀಕರ ಪ್ರದೇಶದಲ್ಲಿ ತಟ್ಟೆಯಲ್ಲಿ ಗಂಜಿ ಕುಡಿಯುತ್ತಿದ್ದಾರೆ ಬೆಂಕಿಯ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗ ಬರುವ ಸುದೀಪ್, ಸ್ವರ್ಗದಲ್ಲಿರುವವರು, ನರಕದಲ್ಲಿರುತ್ತಾರೆ ನರಕದಲ್ಲಿರುವವರು ಸ್ವರ್ಗದಲ್ಲಿರುತ್ತಾರೆ ಎಂದು ಬಿಗ್ಬಾಸ್ ಶೈಲಿಯಲ್ಲಿ ಸ್ವರ್ಗ ನರಕದ ಜೀವನದ ಬಗ್ಗೆ ಹೇಳುತ್ತಾ , ಆ ಮೂಲಕ ಬಿಗ್ಬಾಸ್ ಮನೆಯಲ್ಲಿ ಯಾವ ಸಂಬಂಧವೂ ಶಾಶ್ವತವಲ್ಲ ಎಂದು ಸಹ ಹೇಳಿದ್ದಾರೆ.
ಅಂದಹಾಗೆ ಕನ್ನಡ ಬಿಗ್ಬಾಸ್ ಸೀಸನ್ 11 ಸೆಪ್ಟೆಂಬರ್ 29 ರಂದು ಪ್ರಾರಂಭವಾಗಲಿದೆ. ರಿಯಾಲಿಟಿ ಶೋನ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 29 ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಅದರ ಬಳಿಕ ಪ್ರತಿದಿನ ರಾತ್ರಿ 9:30ಗೆ ಎಪಿಸೋಡ್ಗಳು ಪ್ರಸಾರ ಆಗಲಿವೆ.