Saturday, July 2, 2022

Latest Posts

ಸ್ಯಾಂಡಲ್‌ ವುಡ್‌ ನ ಹಿರಿಯ ನಿರ್ದೇಶಕ ಕೆ.ವಿ ರಾಜು ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್‌ ವುಡ್‌ ನ ಹಿರಿಯ ನಿರ್ದೇಶಕ ಕೆ.ವಿ ರಾಜು ಅವರು ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಜಾಜಿನಗರದ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರ್ದೇಶಕ ಕೆ.ವಿ.ರಾಜು ಬೆಳಗ್ಗೆ 8 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ತಮ್ಮ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹರಿಶ್ಚಂದ್ರ ಘಾಟ್‌ ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಿರ್ದೇಶಕ ಕೆ.ವಿ ರಾಜು ಅವರು 1982ರಲ್ಲಿ ಬಾಡದ ಹೂವು ಸಿನಿಮಾದ ಮೂಲಕ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಹಿಟ್‌ ಸಿನಿಮಾಗಳಾದ ಬೆಳ್ಳಿ ಕಾಲುಂಗುರ, ಯುದ್ಧಕಾಂಡ, ಇಂದ್ರಜಿತ್.‌ ಹುಲಿಯಾ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss