ಹೊಸದಿಗಂತ ವರದಿ,ಕೋಲಾರ:
ಬಹುಭಾಷೆಯಿಂದ ಕೂಡಿರುವ ಗಡಿಜಿಲ್ಲೆಯಲ್ಲಿ ತಾತ್ವಿಕಯ ಬದಲಿಗೆ ಭಾವನಾತ್ಮಕವಾಗಿ ಕನ್ನಡ ಕಟ್ಟುವ ಕೆಲಸವನ್ನು ನಾವೆಲ್ಲರೂ ಮಾಡಿದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ವಿವಿಧ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮವಾಗಬೇಕು ಕನ್ನಡ ಬೆಳೆವಣಿಗೆ ಗಲಾಟೆ, ಘರ್ಷಣೆ ಮಾಡದೇ ಕನ್ನಡ ವಿರೋಧಿಗಳನ್ನು ಮನವೊಲಿಸುವುದು ನಮ್ಮ ಗುರಿಯಾಗುವ ಅಭಿಯಾನವನ್ನು ನಾವು ಮಾಡಬೇಕಾಗಿದೆ ಎಂದರು.
ಬ್ಯಾಂಕುಗಳಿಗೆ ೩ ತಿಂಗಳ ಗಡುವು
ಕರ್ನಾಟಕದಲ್ಲಿರುವ ಬಹುತೇಕ ಬ್ಯಾಂಕ್ಗಳು ರಾಜ್ಯ ಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿವೆ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಾವಳಿಗಳು, ನೇಮಕಾತಿ ಪ್ರಕ್ರಿಯೆ ಹಾಗೂ ಆಡಳಿತದಲ್ಲಿನ ಸಂಪೂರ್ಣ ಕನ್ನಡ ಅನುಷ್ಠಾನ ಕುರಿತು ಸಂಬಂಧಿಸಿದಂತೆ ಸಭೆ ಸಮಾಲೋಚನೆಗಳನ್ನು ನಡೆಸಲಾಗಿದೆ ಕನ್ನಡ ನಾಮಫಲಕಗಳನ್ನು ಹಾಕಿಸಲು ಮೂರು ತಿಂಗಳ ಗಡುವು ನೀಡಲಾಗಿದೆ ಎಂದರು.
ಕೋಲಾರ ಮೊದಲಿನಿಂದಲೂ ಕನ್ನಡ ಹೋರಾಟಗಳಿಗೆ ಹೆಸರುವಾಸಿಯಾಗಿದೆ ಸಮಾನ ಮನಸ್ಸುಗಳು ಸೇರಿದಂತೆ ಸಾಂಸ್ಕೃತಿಕವಾಗಿ ಸಾಹಿತ್ಯಿಕವಾಗಿ ಹಾಗೂ ಶೈಕ್ಷಣಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಭಾಷಾ ಪ್ರೇಮ ಬೆಳಸಬೇಕಾಗಿದೆ ಎಂದರು
ಕನ್ನಡಪರ ಸಂಘಟನೆಯ ಮುಖಂಡ ಚಂಬೆ ರಾಜೇಶ್ ಮಾತನಾಡಿ, ನಗರದಲ್ಲಿ ಬಹುತೇಕ ಅಂಗಡಿಗಳು ಇಂಗ್ಲಿಷ್ ಭಾಷೆಯ ನಾಮಫಲಕಗಳು ನಗರಸಭೆ ಅನುಮತಿ ಕೊಟ್ಟಾಗ ಯಾವುದೇ ಷರತ್ತುಗಳನ್ನು ಕಟ್ಟುನಿಟ್ಟಾಗಿ ವಿಧಿಸುತ್ತಿಲ್ಲ, ಬ್ಯಾಂಕ್ ಗಳಲ್ಲಿ ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು, ಇಲ್ಲವೇ ಅವರನ್ನು ಬಿಡುಗಡೆಗೊಳಿಸಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಎಸಿ ಸೋಮಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಿ.ಎ ಕಿಶೋರ್ ಕಾರ್ಯದರ್ಶಿ ಡಾ.ಗವಿಸಿದ್ದಯ್ಯ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎನ್.ರವಿಕುಮಾರ್,ಕನ್ನಡ ಪರ ಸಂಘಟನೆ ಮುಖಂಡರಾದ ನಾಗನಂದ ಕೆಂಪರಾಜ, ಕೆ.ಆರ್ ತ್ಯಾಗರಾಜ್, ಕೋ.ನಾ ಪ್ರಭಾಕರ್, ಅಕೃ ಸೋಮಶೇಖರ್, ಬಾ.ಹೃ ಶೇಖರಪ್ಪ, ಡಿ.ಆರ್ ರಾಜಪ್ಪ, ನಾ ಮಂಜುನಾಥ್ ಮುಂತಾದವರು ಇದ್ದರು.