Monday, August 15, 2022

Latest Posts

ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತಾಗಿ ಮಾರ್ಪಡಿಸುವೆ: ನಾಡೋಜ ಡಾ. ಮಹೇಶ ಜೋಶಿ

ಹೊಸ ದಿಗಂತ ವರದಿ, ಕಲಬುರಗಿ:

ಈ ನಾಡಿನ ಸಾಹಿತ್ಯ-ಸಂಸ್ಕøತಿ, ನಾಡು-ನುಡಿ, ನೆಲ ಜಲದ ಬಗ್ಗೆ ಪ್ರಾಮಾಣಿಕ ಸೇವೆಗಾಗಿ ಪಣತೊಟ್ಟು ಕ್ರೀಯಾಶೀಲ ಸಂಘಟನನಾಗಿ ಹಾಗೂ ಕನ್ನಡಪರ ಕಾರ್ಯಕರ್ತನಾಗಿ ಮುಂಬರುವ ದಿನಗಳಲ್ಲಿ ಕನ್ನಡ ಸಾಹತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತನ್ನಾಗಿ ಮಾರ್ಪಡಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ರಾಜ್ಯಾದ್ಯಕ್ಷ ಸ್ಥಾನದ ಆಕಾಂಕ್ಷಿ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ಅವರು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರ-ಜನಪಯೋಗಿಯಾಗಿ ಜನ ಸಾಮಾನ್ಯರ ಪರಿಷತ್ತನ್ನಾಗಿ ಮಾರ್ಪಡಿಸಿ, ಅಜೀವ ಶುಲ್ಕವನ್ನು ಕಡಿಮೆಗೊಳಿಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು. ಪರಿಷತ್ತಿನ ಕಾರ್ಯಚಟುವಟಕೆಗಳು ಇನ್ನೂಮುಂದೆ ಸಂಪೂರ್ಣ ಪಾರದರ್ಶಕವಾಗಿರಲಿವೆ. ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ವ್ಯಾಪ್ತಿಯನ್ನು ವಿಸ್ತರಿಸುತ್ತೇನೆ ಎಂದರು.
ಮಾತೃಭಾಷೆಯಾದ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ನೀಡಿ, ಕನ್ನಡ ಶಾಲೆಗಳು ಮುಚ್ಚದ ಹಾಗೇ ಜಾಗೃತಿ ವಹಿಸುವುದಾಗಿ ಹೇಳಿದರು. ಕನ್ನಡ ಅಲ್ಲದ ಭಾಷೆಯಾಗಲು ಎಲ್ಲ ರೀತಿಯ ಭಗೀರಥ ಪ್ರಯತ್ನ ಮಾಡಲಾಗುವುದು. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನನ್ನ ಗುರಿಯಾಗಿದೆ. ಅದರಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸರ್ವಾಧ್ಯಕ್ಷರ ಸ್ಥಾನಮಾನ ನೀಡುವಂತೆ ಪ್ರಯತ್ನಮಾಡಲಾಗುವುದು ಎಂದರು. ಎಲ್ಲ ತಾಲೂಕಿನಲ್ಲಿ ಕನ್ನಡ ಭವನಗಳನ್ನು ನಿರ್ಮಾಣ ಮಾಡಲು ಆಧ್ಯತೆ ನೀಡಲಾಗುವುದು ಎಂದರು.
ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಗೌರವ ತಂದು ರಾಜಕೀಯದಲ್ಲಿ ತಟಸ್ಥನಾಗಿ ಕನ್ನಡ ಪಂತದ ಸೇವಕನಾಗಿ ಇರುತ್ತೇನೆ ಎಂದು ಹೇಳಿದರು. ಇದೇ ಮುಂಬರುವ ಮೇ 9ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ನನಗೆ ಮತ ನೀಡಿ ಕನ್ನಡ ಸೇವೆ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು. ಒಟ್ಟು ರಾಜ್ಯದಲ್ಲಿ ಅತೀ ಹೆಚ್ಚು ಮತದಾರರು ಬೆಂಗಳೂರಿನಲ್ಲಿ 36,389 ಇದ್ದು, 24,207 ಮಂಡ್ಯ, ಮೂರನೇ ಸ್ಥಾನದಲ್ಲಿ ಕಲಬುರಗಿ 16,619 ಮತದಾರರಿದ್ದಾರೆ. ಒಟ್ಟು ರಾಜ್ಯದಲ್ಲಿ ಮೂರು ಲಕ್ಷ ಐದು ಸಾವಿರದ ಆರನೂರು ಇಪ್ಪತ್ತು ಇದ್ದು, ಮತಗಟ್ಟೆಗೆ ತೆರಳಿ ನನಗೆ ಮತ ನೀಡಿ ದಾಖಲೆ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅರಳಿ ನಾಗರಾಜ, ನಬಿ ಸಾಬ ಕುಷ್ಟಗಿ, ಕಿರಣ ಶೆಟಗಾರ, ಸ್ವಾಮಿನಾಥ ಕುಲಕರ್ಣಿ, ಶ್ರೀನಿವಾಸ ಸಿರನೂರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss